ರಾಜಕೀಯ

ಸರ್ಕಾರಿ ಬಸ್ ನಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು..!ಬಸ್ ಇರೋದು ಪ್ರಯಾಣಿಸೋದಕ್ಕೆ,ಸ್ವಚ್ಚತೆ ಕಾಪಾಡಿ ಎಂದ ನೆಟ್ಟಿಗರು

ನ್ಯೂಸ್ ನಾಟೌಟ್ : ಬಸ್ ಸೌಲಭ್ಯ ಇರೋದು ಪ್ರಯಾಣಿಕರ ಓಡಾಟಕ್ಕಾಗಿ.ಆದರೆ ನೀವು ಗಮನಿಸುತ್ತಿರುವ ಈ ಬಸ್ ನಲ್ಲಿ ಬಟ್ಟೆಗಳ ಹಾರಾಟವನ್ನೂ ಕಾಣಬಹುದು.ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲಎಂಬ ಉದ್ದೇಶವೋ ಏನೋ,ಬಟ್ಟೆಯನ್ನು ಬಸ್ ಕಿಟಕಿಯಲ್ಲಿ ಒಣಗಲು ಹಾಕಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಒಂದೆಡೆ ಉಚಿತ ಪ್ರಯಾಣದ ಕೊಡುಗೆಯನ್ನು ಅನುಭವಿಸುತ್ತಿರುವ ಮಹಿಳೆಯರು ಫುಲ್ ಖುಷಿಯಾಗಿ ಬಿಟ್ರೆ ಮತ್ತೊಂದೆಡೆ ಇದೇ ಬಸ್ ನಲ್ಲಿ ತಮ್ಮ ವಸ್ತ್ರಗಳನ್ನೂ ಚಲಿಸುತ್ತಿರುವ ಬಸ್‌ನ ಕಿಟಕಿಗೆ ನೇತು ಹಾಕುವ ಮೂಲಕ ಒಣಗಿಸಲಾರಂಭಿಸಿದ ವಿಡಿಯೋಗಳು ಹರಿದಾಡುತ್ತಿವೆ.

ಈ ದೃಶ್ಯವನ್ನು ವ್ಯಕ್ತಿಯೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು,ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಕಂಡು ಬಂದಿರುವ ದೃಶ್ಯ ಎನ್ನಲಾಗಿದ್ದು,ಸ್ವಚ್ಚತೆಗೆ ಮಹತ್ವ ನೀಡಿ ಎಂದು ಕೆಲವರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಸರ್ಕಾರಿ ಬಸ್ ಗಳನ್ನು ಈ ರೀತಿ ದರ್ಬಳಕೆ ಮಾಡಬೇಡಿ.ಬಸ್ ಹತ್ತಿದ ಬಳಿಕ ಮತ್ತೊಬ್ಬರು ಪ್ರಯಾಣಿಕರು ಪ್ರಯಾಣಿಸುವಂತಿರಲಿ ಎನ್ನುವ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗಿವೆ.

Related posts

ಖ್ಯಾತ ತಮಿಳು ನಟ ವಿಜಯ್ ರಾಜಕೀಯಕ್ಕೆ ಪ್ರವೇಶ, ಪಕ್ಷದ ಹೆಸರು ಘೋಷಿಸಿದ ದಳಪತಿ

ಸುಳ್ಯ: ರಾಮಮಂದಿರ ಉದ್ಘಾಟನೆಯ ಬ್ಯಾನರ್ ಹರಿದ ಪ್ರಕರಣ: ಬಿಜೆಪಿ ನೇತೃತ್ವದಲ್ಲಿ ಆಟೋ ಚಾಲಕರ ಪ್ರತಿಭಟನೆ..! ವಿಡಿಯೋ ವೀಕ್ಷಿಸಿ

ಪ್ರಲ್ಹಾದ ಜೋಶಿ ವಿರುದ್ಧ ಸ್ಪರ್ಧೆಗಿಳಿದ ದಿಂಗಾಲೇಶ್ವರ ಶ್ರೀ..! ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಮೀಜಿ ಕಣಕ್ಕೆ