ರಾಜ್ಯ

ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ;ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ!!

ನ್ಯೂಸ್‌ ನಾಟೌಟ್‌ : ರಾಜ್ಯದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ಈ ಬೆನ್ನಲ್ಲೇ ಸರಕಾರವು ಶರಣಾಗುವ ಓರ್ವ ನಕ್ಸಲನಿಗೆ 7.50 ಲ.ರೂ. ವರೆಗೆ ನಗದು ಪರಿಹಾರ/ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದೆ.

ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಕ್ಸಲರ ಶರಣಾಗತಿ, ಪುನರ್ವಸತಿಗೆ ಸಂಬಂಧಿಸಿದ ಈ ಹಿಂದಿನ ಯೋಜನೆಗಳಿಗೆ ಹೊಸ ರೂಪ ನೀಡಲಾಗಿದೆ. ಹೀಗಾಗಿ ಶರಣಾಗುವ ಓರ್ವ ನಕ್ಸಲನಿಗೆ 7.50 ಲ.ರೂ. ವರೆಗೆ ನಗದು ಪರಿಹಾರ/ಪ್ರೋತ್ಸಾಹಧನ ಸೇರಿದಂತೆ ಹೆಚ್ಚು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಎನಿಸುವಂತಹ ಪ್ಯಾಕೇಜ್‌ ನೀಡಲೂ ನಿರ್ಧರಿಸಿದೆ. ಶರಣಾಗತರಾಗುವವರಿಗೆ ನಗದು ಜತೆಗೆ ಕೌಶಲ ತರಬೇತಿ,ಇತರ ಪ್ರೋತ್ಸಾಹ ಧನ,ಪ್ರಕರಣ ವಾಪಸು ಹಾಗೂ ಪುನರ್ವಸತಿ ಮತ್ತಿತರ ಯೋಜನೆಗಳನ್ನು ಹೊಂದಲಾಗಿದೆ.

2015ರಲ್ಲಿದ್ದ ನಕ್ಸಲ್‌ ಶರಣಾಗತಿ ಯೋಜನೆಯನ್ನು ಇದೀಗ ಪರಿಷ್ಕರಿಸಿದ್ದು,ನಕ್ಸಲರು/ಎಡಪಂಥೀಯ ಭಯೋತ್ಪಾದಕರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಸರಕಾರದ ಲೆಕ್ಕಾಚಾರ.ಉನ್ನತೀಕರಿಸಿದ ಯೋಜನೆಯಡಿ ಶರಣಾಗುವ ನಕ್ಸಲರನ್ನು 3 ಶ್ರೇಣಿಗಳಲ್ಲಿ ವಿಭಾಗಿಸಿ “ಪ್ರವರ್ಗ ಎ’ಯವರಿಗೆ 7.5 ಲ.ರೂ., ಪ್ರವರ್ಗ “ಬಿ’ಯವರಿಗೆ 4 ಲ.ರೂ. ಮತ್ತು ಪ್ರವರ್ಗ “ಸಿ’ಯವರಿಗೆ 2 ಲ.ರೂ. ನಿಗದಿಗೊಳಿಸಲಾಗಿದೆ.

Related posts

Vidhana soudha: ವಿಧಾನಸೌಧ ಪ್ರವೇಶ ಇನ್ನು ಮತ್ತಷ್ಟು ಕಠಿಣ..! ಕ್ಯೂ ಆರ್ ಕೋಡ್ ಪಾಸ್‌, ಹೊಸ ಮೆಟಲ್ ಡಿಟೆಕ್ಟರ್ ಅಳವಡಿಕೆ

ಕೇರಳದಲ್ಲಿ ಅಘೋರಿಗಳಿಂದ ನನ್ನ ವಿರುದ್ಧ ಪ್ರಯೋಗಗಳನ್ನು ಮಾಡಿಸುತ್ತಿದ್ದಾರೆ ಎಂದ ಡಿಸಿಎಂ..! ಈ ಬಗ್ಗೆ ಸ್ಪೋಟಕ ಮಾಹಿತಿ ಹಂಚಿಕೊಂಡ ಡಿಕೆ ಶಿವಕುಮಾರ್..!

ಆರಂಭಿಕ ಸುತ್ತಿನ ಅಂಚೆ ಮತಗಳ ಎಣಿಕೆಯಲ್ಲಿ ಎನ್.​​ಡಿ.ಎ ಗೆ ಭಾರಿ ಮುನ್ನಡೆ..! ಕುತೂಹಲ ಕೆರಳಿಸಿದ ಸುಮಾರು 64.2 ಕೋಟಿ ಮತದಾರರ ತೀರ್ಪು