ದೇಶ-ವಿದೇಶ

ಕೋಟಿಗಟ್ಟಲೆ ಹಣ ಖರ್ಚು ಮಾಡಿ 20 ಸಾವಿರ ಮಂದಿಗೆ ಭರ್ಜರಿ ಬಾಡೂಟ ನೀಡಿದ ಭಿಕ್ಷುಕರ ಕುಟುಂಬ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಭಿಕ್ಷುಕ ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ಅಸಹಾಯಕ ಮುಖ, ಹರಿದ ಬಟ್ಟೆ, ಊಟಕ್ಕೂ ಗತಿ ಇಲ್ಲದೆ ಗಲ್ಲಿ ಗಲ್ಲಿಗಳಿಗೆ ತೆರಳಿ ಬೇಡುವ ಕೈ. ಇಲ್ಲೊಂದು ಅಚ್ಚರಿ ಘಟನೆ ನಡೆದಿದ್ದು, ಭಿಕ್ಷುಕ ಕುಟುಂಬವೊಂದು ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ, 20 ಸಾವಿರ ಮಂದಿಗೆ ಭರ್ಜರಿ ಔತಣಕೂಟ ಏರ್ಪಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಅದೂ ಮದುವೆಗಲ್ಲ ಬದಲಾಗಿ ಅವರ ಅಜ್ಜಿ ತೀರಿಕೊಂಡು 40 ದಿನಗಳು ಕಳೆದಿದ್ದು ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿದೆ.
ಕುಟುಂಬವು ಕೇವಲ ಅತಿಥಿ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲಾ ಜನರನ್ನು ಔತಣಕೂಟಕ್ಕೆ ಕರೆದಿದ್ದರು.

ಈ ಔತಣಕೂಟವು ಶ್ರೀಮಂತರ ಹುಬ್ಬೇರುವಂತೆ ಮಾಡಿತ್ತು. ಈ ಘಟನೆಯು ಗುಜ್ರಾನ್‌ ವಾಲಾದ ರಾಹ್ವಾಲಿ ರೈಲು ನಿಲ್ದಾಣದ ಬಳಿ ನಡೆದಿದ್ದು, ಪಂಜಾಬ್‌ ನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈ ಭೋಜನಕ್ಕೆ ತೆರಳಿದ್ದರು. 250 ಕುರಿಗಳನ್ನು ಹತ್ಯೆ ಮಾಡಲಾಗಿತ್ತು, ವಿವಿಧ ಮಾಂಸ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು ಎಂದು ವರದಿ ತಿಳಿಸಿದೆ.

Click

https://newsnotout.com/2024/11/lady-dance-in-tawel-and-misbehaviour-infront-of-india-gate/
https://newsnotout.com/2024/11/govt-site-kannada-news-school-police-district-administration/
https://newsnotout.com/2024/11/notice-lokayukta-sp-kannada-news-sm-siddaramayya/
https://newsnotout.com/2024/11/music-composer-ar-rehaman-divorce-kannada-news-viral-news-f/
https://newsnotout.com/2024/11/paris-kananda-news-rajasthan-air-india-viral-news-pilot/
https://newsnotout.com/2024/11/indian-marriage-kannada-news-viral-video-money-pouring-viral-d/

Related posts

ಎರಡನೆ ಬಾರಿಗೆ ಮದುವೆಯಾದ ಸನ್ನಿ ಲಿಯೋನ್‌..! 3 ಮಕ್ಕಳೆದುರು 13 ವರ್ಷಗಳ ಬಳಿಕ ಮತ್ತೆ ಮದುವೆ..!

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶದ ಆಸೆ ತೋರಿಸಿ ಅತ್ಯಾಚಾರ..! ಅಡಿಷನ್‌ ಗೆಂದು ಯುವತಿಯನ್ನು ಮನೆಗೆ ಕರೆದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು..!

ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಉಪೇಂದ್ರ ದ್ವಿವೇದಿ ಆಯ್ಕೆ, ಸೇನೆಯಲ್ಲಿ 40 ವರ್ಷಗಳ ಸುದೀರ್ಘ ಸೇವೆ ಮಾಡಿದ್ದ ಲೆಫ್ಟಿನೆಂಟ್ ಜನರಲ್