ಕ್ರೈಂಬೆಂಗಳೂರುವೈರಲ್ ನ್ಯೂಸ್

ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ..! ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು..?

ನ್ಯೂಸ್ ನಾಟೌಟ್: ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಕಾಮುಕನೊಬ್ಬ, ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶೃತಿ ಸಿಂಗ್ ಎಂಬಾಕೆ ತಮಗಾದ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶೃತಿ ತಮ್ಮ ಸ್ನೇಹಿತನ ಜತೆ ಡ್ರಾಪ್ ಪಡೆದು ಮನೆ ಬಳಿ ಬರುತ್ತಿದ್ದರು. ಆಕೆ ಒಬ್ಬಂಟಿಯಾಗಿದ್ದನ್ನು ಗಮನಿಸಿದ ಕಾಮುಕ ಹಿಂಬಾಲಿಕೊಂಡು ಬಂದಿದ್ದ. ನಂತರ ಆಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್‌ನಿಂದ ಇಳಿದು, ಓಡಿ ಬಂದವನೇ ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಗಾಬರಿಯಾಗಿ ಕಿರುಚಾಡಿದ್ದಾಳೆ. ಕೂಡಲೇ ಜನರು ಸೇರಿದ್ದಾರೆ. ಯುವತಿ ಅಲ್ಲಿದ್ದ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ ಎನ್ನಲಾಗಿದೆ.

ಅಷ್ಟಲ್ಲದೆ ಆತನ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯರಿಗೆ ನಗರದಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ಬಗ್ಗೆ ನಾನು ಯಾವುದೇ ರೀತಿಯ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೋರ್ಟ್‌, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇದರಿಂದ ಇನ್ನಷ್ಟು ಮಾನಸಿಕವಾಗಿ ಹಿಂಸೆಯಾಗುತ್ತೆ ಎಂದು ಬರೆದುಕೊಂಡಿದ್ದಾಳೆ. ಇಂತಹ ಬೀದಿ ಕಾಮಣ್ಣರನ್ನು ಪೊಲೀಸರು ನಿರ್ನಾಮ ಮಾಡಬೇಕು. ಹೆಣ್ಮಕ್ಕಳು ನೆಮ್ಮದಿಯಾಗಿ ನಿರ್ಭಿತಿಯಾಗಿ ಓಡಾಡುವಂತಾಗಬೇಕೆಂದು ಆಗ್ರಹಿಸಿದ್ದಾರೆ.

Related posts

ಮಂಗಳೂರು: ಫುಟ್ಬಾಲ್ ಪಂದ್ಯದ ಜಗಳಕ್ಕೆ ವಿದ್ಯಾರ್ಥಿಗಳನ್ನು ಅಪಹರಿಸಿ, ಬಟ್ಟೆ ಬಿಚ್ಚಿಸಿ ಕ್ಷಮೆ ಕೇಳಿಸಿದ ಗ್ಯಾಂಗ್..! ಇಬ್ಬರನ್ನು ಬಂಧಿಸಿದ ಪೊಲೀಸರು..!

ವ್ಯಾನ್ ಒಳಗೆ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡ ಪೊಲೀಸ್ ಹೆಡ್ ಕಾನ್ ಸ್ಟೇಬಲ್! ಹಲವು ಅನುಮಾನಗಳಿಗೆ ಕಾರಣವಾದ ಆತ್ಮಹತ್ಯೆ!

ಸುಳ್ಯ: ಸರ್ಕಾರಿ ಬಸ್ ಟರ್ನ್ ಮಾಡುವಾಗ ಹಿಂದಿನ ಚಕ್ರಕ್ಕೆ ಸಿಲುಕಿದ ಸ್ಕೂಟಿ, ಏನಿದು ಘಟನೆ..?