ವೈರಲ್ ನ್ಯೂಸ್

ಈ ಹಸು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿತಾ? ಈ ಬಗ್ಗೆ ಮನೆ ಮಾಲಿಕ ಹೇಳಿದ್ದೇನು?

ನ್ಯೂಸ್ ನಾಟೌಟ್ : ಅಪರೂಪದ ಪ್ರಕರಣವೊಂದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಿ ಎಂಬಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಪನ್ಲತ್ ಗ್ರಾಮದ ಹಸುವೊಂದು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ್ದು ಎಲ್ಲರಲ್ಲಿ ಅಚ್ಚರಿ ಮುಡಿಸಿದೆ.

ನವೀನ್ ಕುಮಾರ್ ಎಂಬುವವರ ಮನೆಯಲ್ಲಿ ಹಸು ಮೂರು ಕರುಗಳಿಗೆ ಜನ್ಮ ನೀಡಿದ್ದು, ಸದ್ಯ ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ವರದಿ ತಿಳಿಸಿದೆ. ಕೆಲವೇ ಕ್ಷಣದಲ್ಲಿ ಹಸು ಮೂರು ಕರುಗಳಿಗೆ ಜನ್ಮ ನೀಡಿದ ಸುದ್ದಿ ಗಾಳಿಯಂತೆ ನೆರೆಹೊರೆಯಲ್ಲಿ ಹರಡಿದ್ದು, ಪರಿಣಾಮ ಹಸು ಮತ್ತು ಕರುಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಸುವಿನ ಮಾಲಕರಾದ ನವೀನ್ ಕುಮಾರ್ ಕುಟುಂಬಸ್ಥರು, ಈ ಬಗ್ಗೆ ಕೇವಲ ಸುದ್ದಿಯಲ್ಲಿ ಓದಿದ್ದೆವು, ಆದರೆ ಈಗ ನಮ್ಮ ಮನೆಯ ಹಸು ಕೂಡ ಮೂರು ಮಕ್ಕಳಿಗೆ ಜನ್ಮ ನೀಡಿದ್ದು ಅಚ್ಚರಿ ಮತ್ತು ಸಂತಸ ನೀಡಿದೆ ಎಂದು ಹೇಳಿದ್ದಾರೆ.

ಮಾನವರಂತೆ ಹಸುಗಳು ಕೂಡ ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಬಲ್ಲವು ಎಂಬುದು ವಿಶೇಷ. ಆದಾಗ್ಯೂ, ಇದು ಸಾಕಷ್ಟು ಅಪರೂಪ ಎನ್ನಲಾಗಿದೆ.

Related posts

ತನಗೆ ಗುದ್ದಿದ ಕಾರಿನ ಜೊತೆ ಸೇಡು ತೀರಿಸಿಕೊಂಡ ಶ್ವಾನ..! ಸಿಸಿಟಿವಿ ಪರಿಶೀಲನೆ ಮಾಡಿದ ಕುಟುಂಬಸ್ಥರು ಶಾಕ್..!

ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್..! ಕಾರಾಗೃಹಕ್ಕೆ ಆಗಮಿಸಿದ ಅಭಿಮಾನಿಗಳು, ಸಿ.ಆರ್.ಪಿ.ಎಫ್ ತುಕಡಿಗಳಿಂದ ಭದ್ರತೆ..!

ಕಾರು ಹರಿದು ಗಾಯಗೊಂಡಿದ್ದ 2 ನಾಗರಹಾವುಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..! ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ..!