ಕ್ರೈಂ

ಕಲ್ಲುಗುಂಡಿ: ತಾಯಿಗೆ ಆಮಿಷವೊಡ್ಡಿ ಅಪ್ರಾಪ್ತ ಮಗಳನ್ನು ಅತ್ಯಾಚಾರ ಗೈದ ಆರೋಪಿಗೆ ಜಾಮೀನು

ಸುಳ್ಯ: ತಾಯಿಗೆ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪದ ರಕ್ಷಿತ್ ಎಂಬಾತ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

2020ರ ಆ. 23 ರಂದು ಕಲ್ಲುಗುಂಡಿಯ ಬಾಲಕಿಯನ್ನು ಯುವಕ ಆಕೆಯ ತಾಯಿಗೆ ಅಮಲು ಪದಾರ್ಥದ ಆಮಿಷವೊಡ್ಡಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದ. ಬಳಿಕ ಅಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದ ಎನ್ನುವ ದೂರು ವ್ಯಕ್ತವಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಲೇ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಮನೆಗೆ ಬಂದು ವಿಚಾರಿಸಿ ಆಕೆಯನ್ನು ಮಂಗಳೂರಿನ ಸಾಂತ್ವಾನ ಕೇಂದ್ರಕ್ಕೆ ರವಾನಿಸಲಾಗಿತ್ತು. ಆರೋಪಿಯನ್ನು ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆಯಡಿ ಬಂಧಿಸಲಾಗಿತ್ತು. ಇದೀಗ ಪುತ್ತೂರು ೫ನೇ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯವು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಕಾರವಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎನ್ನಲಾಗಿದೆ.

Related posts

ಮಂಗಳೂರು: ಪತ್ನಿಗೆ ವಿಚ್ಛೇದನ ಕೊಡುವುದಕ್ಕೆ ವಿಳಂಬ ಮಾಡಿದ್ದಕ್ಕೆ ಜಡ್ಜ್‌ ಕಾರನ್ನೇ ಪುಡಿಗೊಳಿಸಿದ ಮಾಜಿ ಸೈನಿಕ..! ಅಂಗಡಿಯಿಂದ ದೊಣ್ಣೆ ಖರೀದಿಸಿ ಕೃತ್ಯ..!

ಯುವಕನ ಕೊಲೆ ಮಾಡಿ ಗುಡ್ಡದಲ್ಲಿ ಎಸೆದಿದ್ದ ನಾಲ್ವರ ಬಂಧನ, ಗಾಂಜಾ ಗಲಾಟೆ ತಂದಿತ್ತು ಪ್ರಾಣಕ್ಕೇ ಕುತ್ತು..!

ಮಂಗಳೂರು: ಮೆಸ್ಕಾಂ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ! ಇಲ್ಲಿದೆ ವಿಡಿಯೋ