ಕರಾವಳಿ

ಕಲ್ಲುಗುಂಡಿ:ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ,ಸ್ಕೂಟಿ ಜಖಂ-ಇಬ್ಬರಿಗೆ ಗಾಯ

ನ್ಯೂಸ್ ನಾಟೌಟ್ : ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ನಡೆದಿದೆ.ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಸ್ಕೂಟಿ ಹಾಗೂ ಬಸ್ ನ ಹಿಂಬದಿ ಜಖಂ ಗೊಂಡಿದೆ.

ಏನಿದು ಘಟನೆ?

ಈ ಘಟನೆ ಸಂಪಾಜೆ ಗ್ರಾಮದ ಕಡೆಪಾಲ ಬಳಿ ಇಂದು ಸಂಭವಿಸಿದೆ.ಸುಳ್ಯ ಕಡೆಯಿಂದ ಕಲ್ಲುಗುಂಡಿಗೆ ಕಡೆಗೆ ಸಂಚರಿಸುತ್ತಿದ್ದ ಸ್ಕೂಟಿ ಚಲಿಸುತ್ತಿದ್ದ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ.ಘಟನೆಯಿಂದ ಸ್ಕೂಟಿ ಸವಾರನಿಗೆ ತಲೆಗೆ ಗಾಯವಾಗಿದೆ. ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸ್ಕೂಟಿಯ ಹಿಂಬದಿ ಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಕೂಟಿ ಹಾಗೂ ಬಸ್‌ನ ಹಿಂಭಾಗ ಜಖಂಗೊಂಡಿದ್ದು ,ಕಲ್ಲುಗುಂಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts

ಐವರ್ನಾಡಿನ ಹುಡುಗಿ ಭಾರತೀಯ ಸೈನ್ಯಕ್ಕೆ ಆಯ್ಕೆ

ಕುಂದಾಪುರ: ಅಪ್ರಾಪ್ತ ಯುವತಿಗೆ ವಿವಾಹ ಮಾಡಿಸಿದ್ದಕ್ಕೆ ಆಕೆಯ ತಂದೆ ಮತ್ತು ವರ ಅರೆಸ್ಟ್..! ಆಕೆಯ ತಾಯಿಯಿಂದ ಮದುವೆಗೆ ವಿರೋಧ

ನಾಳೆ ಅಂಗನವಾಡಿ, ಶಾಲೆಗಳಿಗೆ ರಜೆ ವಿಸ್ತರಣೆ