Uncategorized

ಕಲ್ಲಪಳ್ಳಿ: ಅಮ್ಮನ ಹಠಾತ್ ಸಾವು, ಎಂಡೋಸಲ್ಪನ್ ಪೀಡಿತ ಮಗು ಅನಾಥ..!

ನ್ಯೂಸ್ ನಾಟೌಟ್:  ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳು ಕೂಡ ಕೆಲವೊಂದು ಮಾರಕ ಕಾಯಿಲೆಗೆ ತುತ್ತಾಗುತ್ತಿರುವುದನ್ನು ನೋಡಿದ್ದೇವೆ. ಅಂತಹ ಮಾರಕ ಕಾಯಿಲೆಗಳಲ್ಲಿ ಎಂಡೋಸಲ್ಪನ್ ಕೂಡ ಒಂದು. ಎಂಡೋಸಲ್ಪನ್ ಪರಿಣಾಮದಿಂದ ಅದೆಷ್ಟೋ ಜನರು ತಮ್ಮ ಬದುಕು ಕಳೆದುಕೊಂಡಿದ್ದಾರೆ. ಇದೀಗ ಇಲ್ಲೊಬ್ಬ ಬಾಲಕ ಎಂಡೋಸಲ್ಪನ್ ಸುಳಿಗೆ ಸಿಲುಕಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾನೆ. ದುರಾದೃಷ್ಟವಶಾತ್ ಈ ಬಾಲಕ ಇದೀಗ ತನ್ನ ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

ಹೊಸದುರ್ಗ ತಾಲೂಕಿನ ಪನತ್ತಡಿ ಗ್ರಾಮದ ಕಲ್ಲಪಳ್ಳಿಯ ಬಾಲಕ ಲೋಹಿತ್  ಬಾಲ್ಯದಿಂದಲೂ ಸಂಕಷ್ಟದಲ್ಲಿದ್ದ. ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದ. ಇಂತಹ ಬಾಲಕನನ್ನು ತಾಯಿ ಅಮ್ಮ ಸವಿತ ಎಚ್ಚರಿಕೆಯಿಂದ ಇದುವರೆಗೆ ನೋಡಿಕೊಂಡು ಬಂದಿದ್ದರು. ಆದರೆ ಇತ್ತೀಚೆಗೆ ಸವಿತ ಹಠಾತ್ ನಿಧನರಾಗಿದ್ದಾರೆ. ಹೀಗಾಗಿ ಮಗು ರೋಹಿತ್ ನ ಆರೈಕೆಯನ್ನು ಮಾಡುವುದು ತಂದೆಗೆ ಕಷ್ಟವಾಯಿತು. ಬಡ ಕುಟುಂಬ ಆಗಿದ್ದರಿಂದ ಮಗುವನ್ನು ಹೇಗೆ ಸಾಕುವುದು ಎನ್ನುವುದನ್ನು ಊರಿನ ಮುಖಂಡರು, ಜನಪ್ರತಿನಿಧಿಗಳು ಕುಳಿತು ಚರ್ಚಿಸಿದರು.

ಕೊನೆಗೆ ಆ ಮಗುವನ್ನು ತಾಲೂಕು ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆಯವರು ಮನಗಂಡರು.  ಇದು ತಂದೆ ಗಂಗಾಧರನ ಮಾತ್ರ ಸಮಸ್ಯೆಯಲ್ಲ ನಾಡಿನ ಸರಕಾರದ ಜವಾಬ್ದಾರಿ ಎಂದು ಕೇರಳ ಸರಕಾರದ ಮಕ್ಕಳ ಸಂರಕ್ಷಣೆ ಸಮಿತಿ ಮನವಿ ಮಾಡಿಕೊಂಡಿದ್ದರು. ಬಳಿಕ  ಡಿ. 14 ರಂದು ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ಶೀಬಾ ಮಮ್ತಾಜ್,  ಆರೋಗ್ಯಧಿಕಾರಿಗಳ ತಂಡ  ಮಕ್ಕಳ ಸಂರಕ್ಷಣಾ ಸಮಿತಿಯ ಜಿಲ್ಲಾ ಸಮಿತಿಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೀಗ ಮಗುವನ್ನು ಸರಕಾರ ತನ್ನ ತೆಕ್ಕೆಗೆ ಪಡೆದುಕೊಂಡು ಸಂಪೂರ್ಣ ನೋಡುವುದಾಗಿ ತಿಳಿಸಿದೆ. ಡಿ.  15 ರಂದು CWC ಜಿಲ್ಲಾ ಚೆಯರ್ ಮಾನ್ ಅಡ್ವಕೇಟ್ ಮೋಹನ್ ಕುಮಾರ್  ನೇತೃತ್ವದಲ್ಲಿ ಬಾಲಕ ಲೋಹಿತ್ ಬದುಕಿಗೆ ಅರ್ಥ ಪೂರ್ಣವಾದ ರಕ್ಷಣೆ ದೊರಕಿದೆ.

Related posts

ಬಜರಂಗದಳ ಅಪಾಯಕಾರಿ ಸಂಘಟನೆ: ಫೇಸ್ ಬುಕ್ ಆಂತರಿಕ ವರದಿ

ಪತ್ನಿ ಗರ್ಭಿಣಿಯಾಗುತ್ತಲೇ ಕೈಕೊಟ್ಟು ಓಡಿದ ಪಿಡಿಓ

ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು