ನ್ಯೂಸ್ ನಾಟೌಟ್: ನಿಮ್ಮ ಗುಂಡಿಗೆಯಲ್ಲಿ ತಾಕತ್ತೂ ಅಂತ ಇದ್ರೆ ನನ್ನ ಹೊಡಿರಿ ನೋಡೋಣ ಎಂದು ಕಾಳಿ ಸ್ವಾಮಿ ಸವಾಲು ಹಾಕಿದ್ದಾರೆ.
ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಮಾತನಾಡಿ ಕಾಳಿ ಸ್ವಾಮಿ, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ವಿರುದ್ಧ ಹರಿಹಾಯ್ದರು, ನಿಮಗೆ ಮುಂದೆ ಬಂದು ಹೋರಾಡುವುದಕ್ಕೆ ಸಾಧ್ಯವಿಲ್ಲ, ನಿಮಗೆ ನಿಜವಾದ ತಾಕತ್ತು ಇದ್ದಿದ್ದರೆ ಸಿಎಂ ಬೊಮ್ಮಾಯಿಯವರನ್ನು ಮುಟ್ಟಿ, ಅದು ಸಾಧ್ಯವಿಲ್ಲವೋ ಸಿಟಿ ರವಿಯನ್ನು ಮುಟ್ಟಿ ಅದು ಕೂಡ ನಿಮ್ಮಿಂದ ಆಗುವುದಿಲ್ಲ. ಅದೆಲ್ಲ ಯಾಕೆ ನಾನೇ ಇದ್ದೇನೆ ನಿಮಗೆ ತಾಕತ್ತಿದ್ದರೆ ಬಂದು ನನ್ನನ್ನು ಹೊಡೆಯಿರಿ. ಅದನ್ನು ಬಿಟ್ಟು ಅಮಾಯಕ ಕಾರ್ಯಕರ್ತರನ್ನು ಯಾಕೆ ಕೊಲ್ಲುತ್ತೀರಿ? ಇದರಿಂದ ನಾನು ಗೆದ್ದೇ ಎಂದು ಭಾವಿಸುವುದು ನಿಮ್ಮ ಮೂರ್ಖತನವಾಗಿದೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಒಂದು ತಲೆಗೆ ೧೦ ತಲೆ ತೆಗೆಯಬೇಕು ಎನ್ನುವ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕಾಳಿ ಸ್ವಾಮಿ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.