ಕಡಬ: ತೋಟಕ್ಕೆ ಸ್ಪಿಂಕ್ಲರ್ ಅಳವಡಿಸಲು ಹೋಗಿದ್ದಾಗ ರೈತರೊಬ್ಬರಿಗೆ ವಿಷಯ ಹಾವು ಕಚ್ಚಿ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಕೋಡಿಂಬಾಳ ಗ್ರಾಮದ ಪೆಲೆತ್ತೊಡಿ ನಿವಾಸಿ ಧರ್ಮಪಾಲ ಗೌಡ ಎಂದು ಗುರುತಿಸಲಾಗಿದೆ. ಪ್ರಜ್ಷೆ ತಪ್ಪಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.