ಕರಾವಳಿ

ಕಡಬ: ಕೊಯಿಲ ಫಾರ್ಮ್ ನಲ್ಲಿ ಹೊತ್ತಿ ಉರಿದ ಬೆಂಕಿ,ಎಕರೆಗಟ್ಟಲೆ ವ್ಯಾಪಿಸಿ ಅಪಾರ ನಷ್ಟ

ನ್ಯೂಸ್ ನಾಟೌಟ್ : ದ.ಕ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ವರದಿಯಾಗಿದೆ.ಘಟನೆಯಿಂದ ಅಪಾರ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಕೊಯಿಲ ಪಶು ಸಂಗೋಪನ ಕೇಂದ್ರ ಹಲವು ಕಾರಣಗಳಿಗೆ ವಿಶೇಷವಾಗಿತ್ತು.ಘಟನೆಯಿಂದ ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಹಬ್ಬಿದೆ ಎನ್ನಲಾಗಿದೆ. ಪ್ರಕೃತಿ ರಮಣೀಯವಾದ ಈ ಪರಿಸರ ಸದ್ಯ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲುಗಳಿಂದ ಆವೃತ್ತವಾಗಿತ್ತು.ನಿನ್ನೆ ಇದೇ ವ್ಯಾಪ್ತಿಯೊಂದರ ಗುಡ್ಡಭಾಗದಲ್ಲಿ ಬೆಂಕಿ ಹೊತ್ತಿ ಉರಿದಿದ್ದು ನಷ್ಟ ಸಂಭವಿಸಿತ್ತು.

ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಈ ಘಟನೆ ನಡೆದಿದ್ದು, ಬೆಂಕಿ ತಗುಲಿದ ಕೆಲವೇ ಕೆಲವು ನಿಮಿಷದಲ್ಲಿ ಸುಮಾರು 50 ಎಕರೆಗೆ ಬೆಂಕಿ ಹಬ್ಬಿದೆ ಎಂದು ಹೇಳಲಾಗುತ್ತಿದೆ.ಬೆಂಕಿಯ ಕೆನ್ನಾಲಿಗೆಯ ಜತೆಗೆ ದಟ್ಟ ಹೊಗೆ ಭಯ ಬೀಳಿಸುವ ದೃಶ್ಯವೇ ಸೃಷ್ಟಿಯಾಗಿತ್ತು.ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಫಾರ್ಮ್‌ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

Related posts

ಮಂಗಳೂರು: ಕುತ್ತಾರಿನಲ್ಲಿ ಅಕ್ರಮ ಗೋ ಸಾಗಾಟಗಾರರ ವಾಹನ ಜಖಂ! ಬಜರಂಗದಳ ಯುವಕರಿಂದ ಜಾನುವಾರುಗಳ ರಕ್ಷಣೆ

ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ(Dharmastala Soujanya Rape and Murder Case):ಆರೋಪಿಗಳನ್ನು ಮಂಜುನಾಥ ಸ್ವಾಮಿ ಕಣ್ಣೆದುರೇ ತೋರಿಸಲಿ,ಧರ್ಮಸ್ಥಳ ಕ್ಷೇತ್ರ ಹಾಗೂ ಖಾವಂದರ ಅಪಪ್ರಚಾರ ಮಾಡಿದ್ರೆ ಹೋರಾಟ -ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಎಚ್ಚರಿಕೆ,ವಿಡಿಯೋ ವೀಕ್ಷಿಸಿ

ಉಪ್ಪಿನಂಗಡಿ:ವಿದ್ಯುತ್ ಶಾಕ್ ಗೆ ಬಲಿಯಾದ ಯುವಕ,ಪೊಲೀಸ್ ದೂರಿನಲ್ಲೇನಿದೆ?