ನ್ಯೂಸ್ ನಾಟೌಟ್ : ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಗುರಿಯಾಗಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಈಗ ದೇಶದ ಅತ್ಯಂತ ಕಲುಷಿತ ನೀರು ಎಲ್ಲಿದೆ? ಎಂಬ ಪ್ರಶ್ನೆಯನ್ನು ಯಾರನ್ನೇ ಕೇಳಿದರೂ ಅದಕ್ಕೆ ಉತ್ತರ ಮಹಾಕುಂಭದಲ್ಲಿದೆ ಎಂಬ ಉತ್ತರ ಬರುತ್ತದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ನದಿಗೆ ಎಸೆಯಲಾಗಿದೆ. ಇದರಿಂದಾಗಿ ನೀರು ಇನ್ನಷ್ಟು ಕಲುಷಿತವಾಗಿದೆ” ಎಂದು ಜಯಾ ಬಚ್ಚನ್ ಗಂಭೀರ ಆರೋಪ ಮಾಡಿದ್ದಾರೆ.
“ಮಹಾಕುಂಭ ನಡೆಯುತ್ತಿರುವ ಸ್ಥಳದ ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಮಹಾಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಚಿಕಿತ್ಸೆ ಸಿಗುತ್ತಿಲ್ಲ. ಅವರಿಗೆ ಸರಿಯಾದ ಯಾವುದೇ ವ್ಯವಸ್ಥೆ ಇಲ್ಲ. 34 ಕೋಟಿಗೂ ಹೆಚ್ಚು ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಎಂದು ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.
ಪ್ರಸ್ತುತ ಮಹಾಕುಂಭದಲ್ಲಿ ಅತ್ಯಂತ ಕಲುಷಿತ ನೀರು ಇದೆ. ಮೃತ ದೇಹಗಳನ್ನು ನದಿಗೆ ಎಸೆಯಲಾಗಿದ್ದು, ಇದು ಪ್ರಯಾಗರಾಜ್ ನಲ್ಲಿ ನೀರು ವಿಪರೀತ ಕಲುಷಿತಗೊಂಡಿದೆ. ಅದೇ ನೀರನ್ನು ಸಾಮಾನ್ಯ ಜನರಿಗೆ ಪೂರೈಸಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರ ಈ ವಾಸ್ತವದ ಸಮಸ್ಯೆಗಳಿಗೆ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ ಎಂದಿದ್ದಾರೆ.
ಮಹಾ ಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಅಥವಾ ಬಡ ಜನರಿಗೆ ಯಾವುದೇ ವ್ಯವಸ್ಥೆಯನ್ನು ಒದಗಿಸಲಾಗಿಲ್ಲ. ಆದರೆ ವಿಐಪಿಗಳಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಯಾ ಬಚ್ಚನ್ ಆರೋಪಿಸಿದರು.
ಮಹಾ ಕುಂಭಮೇಳದಲ್ಲಿ ಸೇರಿದ ಜನರ ಬಗ್ಗೆ ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ. “ಕೋಟ್ಯಂತರ ಜನರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಯಾವುದೇ ಸಮಯದಲ್ಲಿ ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಇದನ್ನು ನಂಬಲು ಸಾಧ್ಯವೇ” ಎಂದು ಕೇಳಿದ್ದಾರೆ.
Click
ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!
ಮೆಣಸಿನ ಬಜ್ಜಿ ಮಾಡಿ ತಿಂದು ಚಿನ್ನ ಹಣ ಕದ್ದೊಯ್ದ ಕಳ್ಳರು..! ಗ್ಯಾಸ್ ಸಿಲಿಂಡರ್ ಗಳೂ ನಾಪತ್ತೆ..!