ಇತರಜೀವನ ಶೈಲಿ/ಆರೋಗ್ಯಜೀವನಶೈಲಿಮಹಿಳೆ-ಆರೋಗ್ಯರಾಜಕೀಯ

ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು..! ಐಸಿಯುನಲ್ಲಿ ಚಿಕಿತ್ಸೆ

ನ್ಯೂಸ್ ನಾಟೌಟ್ : ಸಚಿವ ಜಮೀರ್ ಅಹಮ್ಮದ್ (Zameer Ahmed Khan) ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು ಇಂದು(ಎ.15) ಜಿಲ್ಲೆಗೆ ಆಗಮಿಸಿದ್ದರು.

ಅಂತೆಯೇ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹೃದಯ ತಜ್ಞರಾದ ಡಾ.ಕಾರ್ತಿಕ್, ಡಾ.ಸುಜಯ್ ರಿಂದ ತಪಾಸಣೆ ನಡೆಸಲಾಯಿತು. ಬಳಿಕ ತುರ್ತು‌ಚಿಕಿತ್ಸಾ ಘಟಕದಲ್ಲಿ ತಪಾಸಣೆ ಮುಂದುವರಿದಿದೆ. ಇಸಿಜಿ ನಾರ್ಮಲ್‌ ಇರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

Related posts

ಪ್ರಜ್ವಲ್ ರೇವಣ್ಣ ಡ್ರೈವರ್ ನಾಪತ್ತೆ..! ವಿಡಿಯೋ ನೀಡಿದ್ದು ನಾನೇ ಎಂದಿದ್ದ ಕಾರ್ತಿಕ್..!

ಉಪಚುನಾವಣೆ ಮತದಾನದ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ ಗಳು ಪತ್ತೆ..!ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೇಳಿದ್ದೇನು..?

‘ಪತ್ರಕರ್ತರು ಒಂದು ರೀತಿಯಲ್ಲಿ ಬಿಜೆಪಿ ಗುಲಾಮರು’ ಎಂದ ರಾಹುಲ್ ಗಾಂಧಿ..! ಈ ಬಗ್ಗೆ ಮುಂಬೈ ಪ್ರೆಸ್‌ ಕ್ಲಬ್‌ ಹೇಳಿದ್ದೇನು..?