ಕರಾವಳಿಸುಳ್ಯ

ಕೆ.ವಿ.ಜಿ.ಪಾಲಿಟೆಕ್ನಿಕ್ ನಲ್ಲಿ ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕ ಉದ್ಘಾಟನೆ

ನ್ಯೂಸ್ ನಾಟೌಟ್ : ಕುರುಂಜಿ ವೆಂಕಟ್ರಮಣ ಗೌಡ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಷನ್ ನ ವಿದ್ಯಾರ್ಥಿ ಘಟಕವು ಉದ್ಘಾಟನೆ ಗೊಂಡಿತು.


ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ.ಕೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಐ.ಎಸ್.ಟಿ.ಇ ಕರ್ನಾಟಕ ಸೆಕ್ಷನ್ ಮ್ಯಾನೆಜಿಂಗ್ ಕಮಿಟಿ ಸದಸ್ಯ ಮತ್ತು ಮೂಡುಬಿದ್ರಿ ಯೇನಪೋಯ ಇನ್ಸ್ಟಿಟ್ಯೂಟ್ ನ ಸಹಾಯಕ ಪ್ರಾಧ್ಯಾಪಕ ಶಶಾಂಕ್ ಎಂ.ಗೌಡ ಘಟಕವನ್ನು ಉದ್ಘಾಟಿಸಿ ತಾಂತ್ರಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಆಂತರಿಕ ಗುಣಮಟ್ಟ ಖಾತರಿ ಕೋಶ(ಐ.ಕ್ಯೂ.ಎ.ಸಿ) ಸಂಚಾಲಕ ವಿವೇಕ್ ಪಿ. ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ಸಂಚಾಲಕ ಫಾಲಚಂದ್ರ ವೈ.ವಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಕವಿತಾ ಪಿ.ಡಿಯವರ ಪ್ರಾರ್ಥನೆ ಮಾಡಿ, ಕಾರ್ಯಕ್ರಮವನ್ನು ಇಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕಿ ಪೂರ್ಣಿಮಾ ಸ್ವಾಗತಿಸಿ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ರಾಮಾದೇವಿ ವಂದಿಸಿ, ಸಂವಹನ ಕೌಶಲ್ಯ ಉಪನ್ಯಾಸಕಿ ಬಿಂದು ಕೆ.ವಿ ಕಾರ್ಯಕ್ರಮ ನಿರೂಪಿಸಿದರು.

Related posts

ಕುಕ್ಕೆ ಸುಬ್ರಹ್ಮಣ್ಯದ ಆನೆಗೆ ಮಾಲಿಕತ್ವದ ಪ್ರಮಾಣ ಪತ್ರ ನೀಡಿದ ಅರಣ್ಯ ಇಲಾಖೆ

ಶ್ರೀ ಭಗವಾನ್ ಸಂಘದಿಂದ ಶ್ರಮದಾನ, ಊರುಬೈಲಿನ ಸೇತುವೆಯಿಂದ ಬೃಹತ್‌ ಮರಗಳ ತೆರವು

ಬೆಳ್ತಂಗಡಿ : ಧರ್ಮಸ್ಥಳ ಮಂಜುನಾಥನ ದೇವರ ದರ್ಶನ ಪಡೆದ ಸಚಿವ ಮಂಕಾಳ ವೈದ್ಯ