ವೈರಲ್ ನ್ಯೂಸ್ಸಾಧಕರ ವೇದಿಕೆ

2024ರ ಮೊದಲ ಉಪಗ್ರಹ ಉಡಾವಣೆ ಯಶಸ್ವಿ,ಈ ಬಗ್ಗೆ ಇಸ್ರೋ ವಿವರಿಸಿದ ಮಾಹಿತಿಗಳು ಇಲ್ಲಿವೆ

ನ್ಯೂಸ್ ನಾಟೌಟ್: ಕಪ್ಪು ಕುಳಿಗಳಂತಹ ಆಕಾಶ ಕಾಯಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್‌-ರೇ ಪೋಲಾರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್‌ (XPoSat (X-ray Polarimeter Satellite)) ಅನ್ನು ಸೋಮವಾರ (ಜನವರಿ 1) ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರಲ್ಲೂ ಹೊಸ ಸಾಧನೆಗೆ ಮುನ್ನುಡಿ ಬರೆದಿದೆ.

ನ್ಯೂಟ್ರಾನ್ ನಕ್ಷತ್ರಗಳ ಆಯಸ್ಕಾಂತೀಯ ಕ್ಷೇತ್ರದ ರಚನೆ ಮತ್ತು ರೇಖಾಗಣಿತ, ಎಕ್ಸ್-ರೇ ಕಿರಣಗಳ ಕಾರ್ಯವಿಧಾನ ಮತ್ತು ಪ್ರಕಾಶಮಾನ ಮತ್ತು ಶಕ್ತಿಗೆ ಸಂಗ್ರಹಣೆ ದರದ ದ್ರವ್ಯರಾಶಿಯೊಂದಿಗೆ ಇರುವ ಸಂಬಂಧಗಳ ಅಧ್ಯಯನವೂ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಎರಡು ಪೇಲೋಡ್‌ಗಳ ಪೈಕಿ ಪ್ರಾಥಮಿಕ ಪೇಲೋಡ್ ಪೋಲಿಕ್ಸ್ (POLIX ಅಥವಾ ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ) ಖಗೋಳ ಮೂಲದ 8-30 keV ಫೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ಶ್ರೇಣಿಯಲ್ಲಿ ಧ್ರುವೀಯ ನಿಯತಾಂಕಗಳನ್ನು (ಪದರ ಮತ್ತು ಧ್ರುವೀಕರಣದ ಕೋನ) ಅಳೆಯುತ್ತದೆ. ಇನ್ನೊಂದು ಪೇಲೋಡ್‌ ಎಕ್ಸ್‌ಸ್ಪೆಕ್ಟ್ (XSPECT ಅಥವಾ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) 0.8-15 ಕೆವಿ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ ಎಂದು ಇಸ್ರೋ ವಿವರಿಸಿದೆ.

ಇಸ್ರೋದ ಪಿಎಸ್‌ಎಲ್‌ವಿ ಸಿ 58 ಮಿಷನ್ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಪೂರ್ವಭಾಗದಲ್ಲಿರುವ ಕೆಳಕಕ್ಷೆಯಲ್ಲಿ ಕೂರಿಸಲಿದೆ ಎನ್ನಲಾಗಿದೆ. ಎಕ್ಸ್‌ಪೋಸ್ಯಾಟ್ ಅನ್ನು ಕಕ್ಷೆಯಲ್ಲಿ ಕೂರಿಸಿದ ಬಳಿಕ ಪಿಎಸ್‌4 ಹಂತ ಎರಡು ಬಾರಿ ಮರುಚಾಲನೆಗೆ ಒಳಗಾಗುತ್ತದೆ. ಕಕ್ಷೆಯಲ್ಲಿನ ಚಲನೆಯ ವೇಗವನ್ನು 350 ಕಿ.ಮೀ. ವೃತ್ತಾಕಾರಕ್ಕೆ ಒಗ್ಗಿಸಿಕೊಂಡು 3 ಅಕ್ಷದ ಸ್ಥಿರ ಸ್ಥಿತಿಯಲ್ಲಿ ಪ್ರಯೋಗಗಳನ್ನು ನಿರ್ವಹಿಸಲು ಸಜ್ಜಾಗುತ್ತದೆ ಎಂದು ಇಸ್ರೋ ವಿವರಿಸಿದೆ.

https://newsnotout.com/2024/01/rashi-bhavishya-new-year-2024/

Related posts

ಕಡಬದ ಹುಡುಗಿ ಕಮಾಲ್: ರಾಜ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ 85ನೇ ಶ್ರೇಯಾಂಕ

‘ಸಾಕುವ ಶಕ್ತಿ ನನಗಿಲ್ಲ, ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದ ತಾಯಿ..! ಈ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಹಡಗನ್ನು ಹೈಜಾಕ್ ಮಾಡಿದ್ಯಾರು? ಭಾರತಕ್ಕೂ ತಟ್ಟಲಿದೆಯಾ ಯುದ್ಧ ಭೀತಿ? ಏನಿದು ಘಟನೆ?