ಕ್ರೈಂನಮ್ಮಲ್ಲೇ ಫಸ್ಟ್ವೈರಲ್ ನ್ಯೂಸ್

ಹೆಜ್ಬುಲ್ಲಾ ಮುಖ್ಯಸ್ಥ ಹೆದರಿ ಅಡಗಿದ್ದ ಬಂಕರ್ ನಲ್ಲಿ 500 ಮಿಲಿಯನ್ ಡಾಲರ್ ಹಣ, ಅಪಾರ ಪ್ರಮಾಣದ ಚಿನ್ನ ಪತ್ತೆ..! ಈ ಬಗ್ಗೆ ಇಸ್ರೇಲ್ ಹೇಳಿದ್ದೇನು..?

ನ್ಯೂಸ್ ನಾಟೌಟ್: ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್‌ನಲ್ಲಿ ಬರೊಬ್ಬರಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.

ಈ ಹಿಂದೆ ಇಸ್ರೇಲ್ ವಾಯುದಾಳಿ ನಡೆಸಿದ್ದ ಬೈರುತ್‌ನ ಆಸ್ಪತ್ರೆಯ ಕೆಳಗಿರುವ ಬಂಕರ್‌ನಲ್ಲಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾದ ಹಣಕಾಸು ಕೇಂದ್ರದ ಬಗ್ಗೆ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸಿವೆ.

ಈ ರಹಸ್ಯ ಬಂಕರ್ ಬೈರುತ್ ನ ಮಧ್ಯದಲ್ಲಿರುವ ಅಲ್ ಸಹೇಲ್ ಆಸ್ಪತ್ರೆಯ ಅಡಿಯಲ್ಲಿದ್ದು, ಇದು ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್ ಆಗಿತ್ತು. ಇಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ನಗದು ಇರಿಸಲಾಗಿತ್ತು. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 4194,50,25,000 ರೂ. ಇಸ್ರೇಲ್ ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆಯನ್ನು ಹೆಚ್ಚಿಸಿದೆ.

ಈ ದಾಳಿಯ ಉದ್ದೇಶವು ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ತನ್ನ ಕಾರ್ಯಾಚರಣೆಗಳಿಗೆ ಧನಸಹಾಯ ನೀಡುವ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಾಗಿತ್ತು ಎಂದು ಇಸ್ರೇಲ್ ಬಹಿರಂಗಪಡಿಸಿದೆ.

ಬಿಗಿ ಭದ್ರತೆಯೊಂದಿಗೆ ರಹಸ್ಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇಲ್ಲಿ ಭೂಗತ ವಾಲ್ಟ್ ಇದ್ದು, ಅದರಲ್ಲಿ ಲಕ್ಷಾಂತರ ಡಾಲರ್ ನಗದು ಮತ್ತು ಚಿನ್ನದ ರೂಪದಲ್ಲಿ ಇರಿಸಲಾಗಿತ್ತು. ಈ ಹಣವನ್ನು ಇಸ್ರೇಲ್ ವಿರುದ್ಧ ದಾಳಿಗೆ ಹಿಜ್ಬುಲ್ಲಾ ಬಳಸುತ್ತಿದ್ದರು. ಆದರೆ, ದಾಳಿಯಲ್ಲಿ ಸಂಪೂರ್ಣ ಹಣ ನಷ್ಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾಹಿತಿ ಬಹಿರಂಗ ಪಡಿಸಿಲ್ಲ.

Click

https://newsnotout.com/2024/10/cab-driver-kannada-news-viral-news-romance-viral-notice/
https://newsnotout.com/2024/10/kannada-news-actor-darshan-kannada-news-health-issue-highcourt/

Related posts

ಗಣಪತಿ ವಿಸರ್ಜನಾ ಮೆರವಣಿಯಲ್ಲಿ 3 ವಿದ್ಯಾರ್ಥಿಗಳಿಗೆ ಚಾಕು ಇರಿತ..! ನಾಗಮಂಗಲ ಕೋಮು ಗಲಭೆ ಬಳಿಕ ಮತ್ತೊಂದು ದುರಂತ..!

ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸಿದ ಭೂಪ! ಇಲ್ಲಿದೆ ವೈರಲ್ ವಿಡಿಯೋ

ಹೊಸ ವರ್ಷದ ಮೊದಲ ದಿನವೇ 7.6 ತೀವ್ರತೆಯ ಭೂಕಂಪ..! ಸುನಾಮಿಯ ಎಚ್ಚರಿಕೆ ನೀಡಿದ ಸರ್ಕಾರ!