ಕ್ರೈಂದೇಶ-ಪ್ರಪಂಚವಿಡಿಯೋ

ಇರಾನಿನ ಬ್ಲಾಗರ್ ದಂಪತಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಜೈಲು..! ವೈರಲ್ ಆದ ವಿಡಿಯೋದಲ್ಲಿ ಅಂತಹದ್ದೇನಿದೆ ? ವೀಕ್ಷಿಸಿ

ನ್ಯೂಸ್ ನಾಟೌಟ್:  ಹಿಜಾಬ್ ಗಲಾಟೆಯ ಕಾರಣಕ್ಕಾಗಿ ಮಹ್ಸಾ ಅಮಿನಿ(Mahsa Amini) ಅವರ ಅಂತ್ಯದ ನಂತರ ಇರಾನ್ ವ್ಯಾಪಕವಾದ ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಕಂಡಿದೆ. ಇದರ ಮಧ್ಯೆ, ಇರಾನ್ ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸರ್ಕಾರವು ಪ್ರತಿಭಟನೆಯನ್ನು ತಡೆಯಲು ಯಾವುದೇ ಯಾವುದೇ ಪ್ರಯತ್ನ ಮಾಡಿಲ್ಲ.

ಈ ವೇಳೆ ಡ್ಯಾನ್ಸ್ ವಿಡಿಯೋ ಮಾಡಿದ್ದಕ್ಕಾಗಿ ಯುವ ಬ್ಲಾಗರ್ ದಂಪತಿಗೆ ಇರಾನ್ ಕೋರ್ಟ್ 10 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಬ್ಲಾಗರ್‌ಗಳಾದ ಅಸ್ಟಿಯಾಜ್ ಹಘಿಘಿ ( Astiyaz Haghighi) ಮತ್ತು ಅಮೀರ್ ಮೊಹಮ್ಮದ್ ಅಹ್ಮದಿ (Amir Mohammad Ahmadi) ದಂಪತಿಗಳು ಇರಾನ್ ಪ್ರತಿಭಟನಾಕಾರರನ್ನು ಬೆಂಬಲಿಸುವ ನೃತ್ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು.

ನಿಜವಾಗಿಯೂ ಅಲ್ಲಿ ನಡೆದದ್ದಾದ್ರೂ ಏನು?

ಮಹಿಳೆಯರಿಗಾಗಿ ಇರಾನ್‌ನಲ್ಲಿ ಹೇರಲಾದ ಕಟ್ಟುನಿಟ್ಟಿನ ನಿಯಮಗಳನ್ನು ಧಿಕ್ಕರಿಸಿ ಹಘಿಘಿ ತಲೆಗೆ ಸ್ಕಾರ್ಫ್ ಧರಿಸಿರಲಿಲ್ಲ. ಇರಾನ್‌ನಲ್ಲಿ ಮಹಿಳೆಯರಿಗೆ ಸಾರ್ವಜನಿಕವಾಗಿ ನೃತ್ಯ ಮಾಡಲು ಅವಕಾಶವಿಲ್ಲ ಅದನ್ನು ಉಲ್ಲಂಘಿಸಿದ್ದಾರೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ನೃತ್ಯ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸಿದ ಆರೋಪದಲ್ಲಿ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದೆ.

ಇರಾನ್‌ನ ರಾಜಧಾನಿ ಟೆಹ್ರಾನ್‌ನ ಫ್ರೀಡಂ ಸ್ಕ್ವೇರ್‌ನಲ್ಲಿ ಬೀದಿ ನೃತ್ಯ ಮಾಡುವ ವೀಡಿಯೊವನ್ನು ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಇಸ್ಲಾಮಿಕ್ ಸರ್ಕಾರವು ಅಸಮಾಧಾನ ವ್ಯಕ್ತಪಡಿಸಿದಾಗ ದಂಪತಿಗಳನ್ನು ಬಂಧಿಸಲಾಗಿತ್ತು.

https://twitter.com/ShazzShams/status/1620056451468374018?ref_src=twsrc%5Etfw%7Ctwcamp%5Etweetembed%7Ctwterm%5E1620056451468374018%7Ctwgr%5Eccf6271cf6e259dda128011174ea21d6d33b3a5c%7Ctwcon%5Es1_&ref_url=https%3A%2F%2Fzeenews.india.com%2Fviral%2Firanian-blogger-couple-sentenced-for-more-than-10-years-over-viral-dance-video-2568626.html

ವರದಿಗಳ ಪ್ರಕಾರ, ಇವರ ವಿಡಿಯೋ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ನ್ಯಾಯಾಲಯವು ಅಸ್ತಿಯಾಜ್ ಮತ್ತು ಅಮೀರ್ ವಿರುದ್ಧ ಆರೋಪಿಸಿದೆ.

Related posts

ಪೆರಾಜೆ: ನೇಣು ಬಿಗಿದು ಯುವಕ ಆತ್ಮಹತ್ಯೆ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ

ಗುದನಾಳಕ್ಕೆ ಏರ್ ಪ್ರೆಶರ್ ಪೈಪ್‍ ನಿಂದ ಗಾಳಿ ಬಿಟ್ಟ ಸ್ನೇಹಿತ..! ತಮಾಷೆ ತಂದ ಭೀಕರ ಸಾವು..!

ದ್ವಿತೀಯ ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ವೇತನ ಮತ್ತು ಇತರ ಮಾಹಿತಿ