ಕ್ರೀಡೆ/ಸಿನಿಮಾ

IPL: 40 ಸಾವಿರ ಕೋಟಿಗಳಿಸಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್..!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಒಂದೇ ವರ್ಷದಲ್ಲಿ ಬಿಸಿಸಿಐ 50 ಸಾವಿರ ಕೋಟಿಗೂ ಅಧಿಕ ಆದಾಯಗಳಿಸುವ ಭರ್ಜರಿ ಪ್ಲ್ಯಾನ್​ನಲ್ಲಿದೆ. ಈ ಮೊದಲು ಹೊಸ ಎರಡು ತಂಡಗಳ ಮಾರಾಟದಿಂದ 12,725 ಕೋಟಿ ರೂ. ಪಡೆದಿರುವ ಬಿಸಿಸಿಐ ಇದೀಗ ಪ್ರಸಾರ ಹಕ್ಕಿನಿಂದ 40 ಸಾವಿರ ಕೋಟಿ ಪಡೆಯುವ ಇರಾದೆಯಲ್ಲಿದೆ. ಹೌದು, ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್​ಗಳ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಿದೆ. ಅದರಂತೆ ಶೀಘ್ರದಲ್ಲೇ ಟೆಂಡರ್ ಕರೆಯಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಹೊಸ ತಂಡಗಳ ಮಾರಾಟದಿಂದ 12 ಸಾವಿರ ಕೋಟಿಗೂ ಅಧಿಕ ಮೊತ್ತಗಳಿಸಿರುವ ಕಾರಣ, 2023 ರಿಂದ 2027 ರವರೆಗಿನ ಮಾಧ್ಯಮ ಪ್ರಸಾರ ಹಕ್ಕಿನಿಂದ 40 ಸಾವಿರ ಕೋಟಿಗೂ ಅಧಿಕ ಮೊತ್ತಗಳಿಸುವ ನಿರೀಕ್ಷೆಯಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಐಪಿಎಲ್ ನೇರ ಪ್ರಸಾರ ಹಕ್ಕಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್​ನ ವಯಾಕಾಮ್, ಸ್ಟಾರ್ ನೆಟ್​ವರ್ಕ್​ ಮತ್ತು ಸೋನಿ ನೆಟ್​ವರ್ಕ್​ ಈಗಾಗಲೇ ಆಸಕ್ತಿ ಹೊಂದಿದ್ದು, ಇದರ ಜೊತೆಗೆ ಮತ್ತಷ್ಟು ಟಿವಿ-ಡಿಜಿಟಲ್ ಫ್ಲಾರ್ಟ್​ಫಾರ್ಮ್​ಗಳನ್ನು ಆಕರ್ಷಿಸುವ ಮೂಲಕ ಬಿಸಿಸಿಐ 40 ಸಾವಿರ ಕೋಟಿ ರೂ. ಅಧಿಕ ಆದಾಯಗಳಿಸುವ ಇರಾದೆಯಲ್ಲಿದೆ.

Related posts

ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಸಾಧನೆ ,ಪಂಜದ ರವಿ ಕುಮಾರ್ ಚಳ್ಳಕೋಡಿ ರವರಿಗೆ ಪದಕ

ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರ್‌ ಅಶ್ವಿನ್‌..! ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಅಶ್ವಿನ್‌

ಲೋಕಸಭಾ ಚುನಾವಣೆಗೆ ನಟಿ ಕಂಗನಾ ಸ್ಪರ್ಧೆ..? ಯಾವ ಕ್ಷೇತ್ರದಲ್ಲಿ ಸ್ಪರ್ಧೆ..?