ಕ್ರೀಡೆ/ಸಿನಿಮಾ

ಐಪಿಎಲ್ ಲೀಗ್ ಹಂತದ ಪಂದ್ಯಗಳಿಗೆ ತೆರೆ: ಕೊನೆ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ತಂಡಗಳಿಗೆ ಜಯ

ದುಬೈ/ಅಬುಧಾಬಿ: ಲೀಗ್ ಹಂತದ ಐಪಿಎಲ್ ಪಂದ್ಯಗಳಿಗೆ ಶುಕ್ರವಾರ ತೆರೆಬಿತ್ತು. ಅಬುಧಾಬಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ 7 ವಿಕೆಟ್ ಗೆಲುವು ಸಾಧಿಸಿತು. ಗೆಲುವಿಗೆ 165 ರನ್ ಗುರಿ ಪಡೆದಿದ್ದ ಆರ್‌ಸಿಬಿ 20 ಓವರ್‌ಗೆ 3 ವಿಕೆಟ್‌ಗೆ 166 ರನ್‌ಗಳಿಸಿ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ ಬೃಹತ್ 226 ರನ್ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗೆ 8 ವಿಕೆಟ್‌ಗೆ 193 ರನ್‌ಗಳಿಸಲಷ್ಟೇ ಶಕ್ತವಾಗಿ 42 ರನ್ ಸೋಲು ಅನುಭವಿಸಿತು.

ಅ.10ಕ್ಕೆ ಕ್ವಾಲಿಫೈಯರ್, 11ಕ್ಕೆ ಎಲಿಮಿನೇಟರ್

ಅಕ್ಟೋಬರ್ 10ರಂದು ಕ್ವಾಲಿಫೈಯರ್ 1 ಪಂದ್ಯ ನಡೆಯಲಿದೆ. ಈ ಸೆಣಸಿನಲ್ಲಿ ಮಾಜಿ ಚಾಂಪಿಯನ್ ಸಿಎಸ್ ಕೆ –ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದಲ್ಲಿ ವಿಜೇತ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿವೆ. ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಆಡುವ ಮತ್ತೊಂದು ಅವಕಾಶ ಪಡೆದುಕೊಳ್ಳಲಿದೆ. ಅಕ್ಟೋಬರ್ 11ರಂದು ಎಲಿಮಿನೇಟರ್ ನಡೆಯಲಿದೆ. ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶ ಪಡೆದುಕೊಂಡರೆ ಸೋತ ತಂಡ ಮನೆ ಕಡೆ ಮುಖ ಮಾಡಲಿದೆ. ಅ.13ರಂದು ಕ್ವಾಲಿಫೈಯರ್ 2 ಹಾಗೂ ಅ.15ರಂದು ಫೈನಲ್ ಪಂದ್ಯ ನಡೆಯಲಿದೆ.

Related posts

ಅಪಘಾತದ ಬಳಿಕ ಮೊದಲ ರಿಷಬ್ ಪಂತ್ ಮೊದಲ ಸಂದೇಶ, ಇನ್ಟಾಗ್ರಾಮ್ ನಲ್ಲಿ “ನಾನು ಚೇತರಿಸಿಕೊಳ್ಳುತ್ತಿದ್ದೇನೆ” ಎಂದ ಕ್ರಿಕೆಟಿಗ

ಸೂಪರ್ ಸ್ಟಾರ್ ವಿಜಯ್ ಮೇಲೆ ಚಪ್ಪಲಿ ಎಸೆದ್ಯಾರು..? ವಿಜಯ್ ಕಾಂತ್ ಅಂತ್ಯಸಂಸ್ಕಾರದ ವೇಳೆ ಅಂತದ್ದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

ಖ್ಯಾತ ನಟಿ ಪೂಜಾ ಗಾಂಧಿಗೆ ನಾಳೆ ಮದುವೆ..!ಕನ್ನಡ ಕಲಿಸಿದ ಹುಡುಗನ ಕೈ ಹಿಡಿಯುತ್ತಿರುವ ‘ಮಳೆ ಹುಡುಗಿ’..!ಹುಡುಗ ಯಾರು ಗೊತ್ತೆ..?