ಶಾರ್ಜಾ: ಮಹತ್ವದ ಪಂದ್ಯದಲ್ಲಿ ಎಡವುದನ್ನು ಆರ್‌ಸಿಬಿ ಮೈಗೂಡಿಸಿಕೊಂಡಂತಿದೆ. ಹಳೆಯ ಸೋಲಿನ ಚಾಳಿಯನ್ನು ಮುಂದುವರಿಸಿದ ಆರ್‌ಸಿಬಿಯು ಸೋಮವಾರ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಕೆಕೆಆರ್ 4 ವಿಕೆಟ್ ಗೆಲುವು ಸಾಧಿಸಿ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶ ಪಡೆದುಕೊಂಡಿತು. 139 ರನ್ ವಿಜಯದ ಗುರಿ ಬೆನ್ನಟ್ಟಿದ ಕೆಕೆಆರ್ 19.4 ಓವರ್‌ಗೆ 6 ವಿಕೆಟ್‌ಗೆ139 ರನ್‌ಗಳಿಸಿ ಜಯ ಶಾಲಿಯಾಯಿತು. ಕೆಕೆಆರ್ ಮುಂದಿನ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ.