ಕ್ರೈಂವೈರಲ್ ನ್ಯೂಸ್

ಇನ್ಫೊಸಿಸ್ ಕ್ಯಾಂಪಸ್‌ ನಲ್ಲಿ ಕಾಣಿಸಿಕೊಂಡಿದ್ದ ಚಿರತೆ 10 ದಿನಗಳಿಂದ ಹುಡುಕಿದರೂ ಪತ್ತೆ ಇಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಅರಣ್ಯ ಇಲಾಖೆ..!

ನ್ಯೂಸ್ ನಾಟೌಟ್: ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಇರುವ ಇನ್ಫೊಸಿಸ್ ಕ್ಯಾಂಪಸ್‌ ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯು ಸ್ಥಗಿತಗೊಳಿಸಿದೆ.

ಡಿಸೆಂಬರ್ 31ರಂದು ಕ್ಯಾಂಪಸ್‌ ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಬಹುತೇಕ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಿತ್ತು. ಅರಣ್ಯ ಇಲಾಖೆಯು ತಂಡಗಳನ್ನು ರಚಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು. ಚಿರತೆಯ ಚಲನವಲನ ಗುರುತಿಸಲು ಅಲ್ಲಲ್ಲಿ ಕ್ಯಾಮೆರಾ ಟ್ರ್ಯಾಪ್‌ ಗಳನ್ನು ಅಳವಡಿಸಲಾಗಿತ್ತು. ಇಲಾಖೆಯ 80ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಕಳೆದ 10 ದಿನಗಳಿಂದ ಕ್ಯಾಂಪಸ್‌ ನಲ್ಲಿ ಎಲ್ಲಿಯೂ ಚಿರತೆಯ ಹೆಜ್ಜೆ ಗುರುತು ಕಾಣಿಸಿಲ್ಲ. ಅದರ ಇರುವಿಕೆಯ ಕುರುಹುಗಳು ಸಿಕ್ಕಿಲ್ಲ. ಹೀಗಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಮರುಕಳಿಸದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಂಪನಿಗೆ ಸಲಹೆ ನೀಡಿದ್ದು, ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್‌ ನಲ್ಲಿ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

Click

https://newsnotout.com/2025/01/ayyappa-swami-devotees-hit-and-run-kannada-news-8-people/
https://newsnotout.com/2025/01/lakshmi-hebbalkar-kannada-news-doctor-kannada-news-d/
https://newsnotout.com/2025/01/udupi-kannada-news-malpe-jwellery-viral-news/
https://newsnotout.com/2025/01/january-19-kannada-news-ban-tick-tok-in-america-viral-news-fh/
https://newsnotout.com/2025/01/tulu-cinema-rupesh-shetty-and-bollywood-actor-tulunadu/
https://newsnotout.com/2025/01/monkey-illness-kannada-news-132-people-issue-last-year/
https://newsnotout.com/2025/01/mahakumbha-mela-steve-jobs-wife-in-kumbh-mela-kannada-news-health/
https://newsnotout.com/2025/01/mahakumbha-mela-2025-and-muslim-man-arrested-for-suspect-kannada-news/

Related posts

ರೈಲಿನಡಿಗೆ ಬಿದ್ದು 17 ಎಮ್ಮೆಗಳು ಸಾವು..!

76 ಶಾಲೆಗಳು ಪಾಕಿಸ್ತಾನದ ವಶಕ್ಕೆ..! ಶಾಲೆಗಳನ್ನು ಮಿಲಿಟರಿ ಪೋಸ್ಟ್‌ಗಳನ್ನಾಗಿ ಬದಲಿಸಿದ ಪಾಕ್‌ ಆರ್ಮಿ!

ಕನಸಲ್ಲಿ ಬಂದ ಚೌಡೇಶ್ವರಿ ದೇವಿಗಾಗಿ ದೇಗುಲವನ್ನೇ ನಿರ್ಮಿಸಿದ ಮುಸ್ಲಿಂ ಭಕ್ತ! , ಕೋಮು ಸೌಹಾರ್ದತೆಯ ಸಂದೇಶ ಸಾರಿದ ವ್ಯಕ್ತಿ ಯಾರು?