ನ್ಯೂಸ್ ನಾಟೌಟ್ : ಅದ್ಧೂರಿ ವಿವಾಹದ ವಿಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮದುವೆಯಲ್ಲಿ ಹೂವಿನ ಸ್ವಾಗತ ಮಾಡಿದರೆ, ಈ ಮದುವೆಯಲ್ಲಿ ಹಣದ ಗರಿ-ಗರಿ ನೋಟುಗಳನ್ನು ಎಸೆದು ನವ ದಂಪತಿಗಳನ್ನು ಸ್ವಾಗತಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಸುಮಾರು 20ಲಕ್ಷಕ್ಕೂ ಅಧಿಕ ಹಣ ಸುರಿಸಲಾಗಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವರ ಹಾಗೂ ವಧುವಿನ ಸಂಬಂಧಿಕರು ಜೆಸಿಬಿಗಳ ಮೇಲೆ ಹತ್ತಿ 100, 200 ಮತ್ತು 500 ರೂಪಾಯಿಗಳ ರಾಶಿ ರಾಶಿ ನೋಟುಗಳನ್ನು ಎಸೆಯುತ್ತಿರುವುದು ಸೆರೆಯಾಗಿದೆ. ವಿಡಿಯೋದಲ್ಲಿ, ಅತಿಥಿಗಳು ವರನನ್ನು ಹೊತ್ತ ರಥದ ಮೇಲೆ ನಗದು ಸುರಿಯಲು ಎರಡು ಜೆಸಿಬಿಗಳ ಮೇಲೆ ಹತ್ತುತ್ತಿರುವುದು ಮತ್ತು ಜನರು ಆವರಣದಲ್ಲಿ ಜಮಾಯಿಸಿರುವುದು ಕಂಡುಬಂದಿದೆ. ಹಣ ಸುರಿಯುತ್ತಿದ್ದಂತೆ ಕೆಳಗಿದ್ದ ಜನ ಮುಗಿಬಿದ್ದು ಹೆಕ್ಕಿಕೊಂಡಿದ್ದಾರೆ.
entertainmenthers ಎಂಬ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ದುಡ್ಡು ಹೆಚ್ಚಾದರೆ ಬಡವರಿಗೆ ದಾನ ಮಾಡಿ, ಹೀಗೆ ವ್ಯರ್ಥ ಮಾಡಬೇಡಿ ಎಂದು ಹಲವರು ಸಲಹೆ ನೀಡಿದ್ದಾರೆ.
Click