ದೇಶ-ಪ್ರಪಂಚವೈರಲ್ ನ್ಯೂಸ್

ಸೇನೆಗೆ ಸೇರ ಬಯಸುವವರಿಗೆ ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಹೇಗೆ? ಕೊನೆಯ ದಿನಾಂಕ ಯಾವತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy – NDA) ಮತ್ತು ನೌಕಾ ಅಕಾಡೆಮಿ ಸೇರಬೇಕು ಎಂಬುದು ಅನೇಕ ಯುವ ಜನತೆಯ ಕನಸಾಗಿದೆ. ಇದೀಗ ಈ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಯುವ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ, ಹುದ್ದೆ ವಿವರ, ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

* ಎನ್​ಡಿಎ (ಸೇನೆ) – 208, *ಎನ್​ಡಿಎ (ನೌಕಾ ಸೇನೆ) – 42, *ಎನ್​ಡಿಎ (ವಾಯು ಸೇನೆ) (ಹಾರಾಟ) -18, *ಎನ್​ಡಿಎ (ವಾಯು ಸೇನೆ) (ಗ್ರೌಂಡ್​ ಡ್ಯೂಟಿ) -10, *ನೌಕಾ ಅಕಾಡೆಮಿ – 30, *ಭಾರತೀಯ ಸೇನಾ ಅಕಾಡೆಮಿ – 100, *ಭಾರತೀಯ ನೌಕಾ ಅಕಾಡೆಮಿ – 32, * ವಾಯು ಸೇನಾ ಅಕಾಡೆಮಿ – 32, * ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಪುರುಷ) – 275, *ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಮಹಿಳಾ) -18.

ಎನ್​ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನಾ ಅಕಾಡೆಮಿ ಹುದ್ದೆಗೆ ಪದವಿ, ಭಾರತೀಯ ನೌಕ ಅಕಾಡೆಮಿಗೆ ಇಂಜಿನಿಯರಿಂಗ್​ ಪದವಿ, ವಾಯು ಸೇನಾ ಅಕಾಡೆಮಿಗೆ ಪದವಿ, ಇಂಜಿನಿಯರಿಂಗ್​ ಪದವಿ, ಆಫೀಸರ್​ ಟ್ರೈನಿಂಗ್​ ಅಕಾಡೆಮಿಗೆ ಪದವಿ ಪೂರ್ಣಗೊಳಿಸಿರಬೇಕು
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ಜುಲೈ 2005ಕ್ಕಿಂತ ಮುಂಚೆ ಮತ್ತು 1 ಜುಲೈ 2008ಕ್ಕೆ ನಂತರ ಜನಿಸಿರಬಾರದು ಎಂದು ಷರತ್ತು ವಿಧಿಸಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎನ್​ಡಿಎ ಮತ್ತು ನೌಕಾ ಅಕಾಡಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರ್ತಿ ಮಾಡಬೇಕು.

ಕಂಬೈನ್ಡ್​​ ಡಿಫೆನ್ಸ್​ ಸರ್ವೀಸ್​ ಪರೀಕ್ಷೆಗೆ ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಅರ್ಜಿಸಲ್ಲಿಕೆಗೆ ಕಡೆಯ ದಿನಾಂಕ ಜನವರಿ 9 ಆಗಿದೆ. ಅರ್ಜಿ ಪರಿಷ್ಕರಣೆಗೆ ಜನವರಿ 10 ರಿಂದ 16ರವರೆಗೆ ಅವಕಾಶ ಇದೆ. ಏಪ್ರಿಲ್​ 21ರಂದು ಪರೀಕ್ಷೆ ನಡೆಯಲಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು upsc.gov.in ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

Related posts

ಕೇರಳ: ಕಾಲಿನ ಮೂಲಕ ಕಾರು ಚಲಾಯಿಸಿ​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ

ಮೇಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ತಂದದ್ದೇಕೆ ರೈತ? ಹೂವಿನ ಬೆಳೆಗೆ ಹಾನಿ ಮಾಡಿದ್ದಕ್ಕೆ ಇದೆಂಥಾ ಶಿಕ್ಷೆ..?

ಹಿಜಾಬ್ ವಿವಾದದ ಬಳಿಕ ಈ ಶಾಲೆಗಳಲ್ಲಿ ನಿಖಾಬ್ ಕೂಡ ನಿಷೇಧ! ಈ ಮುಸ್ಲಿಂ ದೇಶ ಹೀಗೆ ಆದೇಶಿಸಿದ್ದೇಕೆ?