Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಾಕ್‌ ಗಡಿಯಲ್ಲಿ 2 ದಿನ ಕಾದು ಮತ್ತೆ ಮೈಸೂರಿಗೆ ಮರಳಿದ ಮಹಿಳೆ..! ಮಕ್ಕಳಿಗೆ ಪಾಕ್ ಪೌರತ್ವ, ತಾಯಿಗೆ ಭಾರತದ ಪೌರತ್ವ..!

1.1k

ನ್ಯೂಸ್ ನಾಟೌಟ್: ಕೌಟುಂಬಿಕ ಕಲಹದಿಂದ ಬೇಸತ್ತು ಪಾಕಿಸ್ಥಾನದಿಂದ ತವರಿಗೆ ವಾಪಸಾಗಿದ್ದ ಮಹಿಳೆ ಮತ್ತು ಆಕೆಯ 3 ಮಕ್ಕಳು ಮತ್ತೆ ಪಾಕ್‌ ಗೆ ತೆರಳಲು ಅವಕಾಶ ಸಿಗದೆ ಶುಕ್ರವಾರ(ಮೇ.2) ವಾಘಾ ಗಡಿಯಿಂದ ಮೈಸೂರಿಗೆ ಹಿಂದಿರುಗಿದ್ದಾರೆ.

ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಜೀವ್‌ ನಗರದ ನಿವಾಸಿ ರಂಷಾ ತನ್ನ ಮಕ್ಕಳೊಂದಿಗೆ ಎ.29ರಂದು ವಾಘಾ ಗಡಿ ತಲುಪಿದ್ದರು. ಆದರೆ ಗಡಿಯಲ್ಲಿ ಪಾಕಿಸ್ಥಾನ ಅಧಿಕಾರಿಗಳು ಅಲ್ಲಿನ ರಾಜತಾಂತ್ರಿಕ ಕಾರಣದಿಂದ ಒಳಗೆ ಬಿಟ್ಟುಕೊಳ್ಳದ ಪರಿಣಾಮ 2 ದಿನ ಗಡಿಯಲ್ಲೇ ಕಾಯ್ದು ಮತ್ತೆ ಮೈಸೂರಿಗೆ ಮರಳಿದ್ದಾರೆ.

10 ವರ್ಷಗಳ ಹಿಂದೆ ರಂಷಾ ಪಾಕಿಸ್ಥಾನದ ಮೊಹಮ್ಮದ್‌ ಫಾರೂಖ್‌ ಎಂಬಾತನನ್ನು ವಿವಾಹವಾಗಿದ್ದರು. ಈಕೆಗೆ ಜನಿಸಿದ್ದ 3 ಮಕ್ಕಳಿಗೆ ಪಾಕಿಸ್ಥಾನ ಪೌರತ್ವ ಸಿಕ್ಕಿತ್ತು. ಆದರೆ ರಂಷಾಗೆ ಅಲ್ಲಿನ ಪೌರತ್ವ ಸಿಕ್ಕಿರಲಿಲ್ಲ. ಪಹಲ್ಗಾಮ್‌ ಉಗ್ರರ ದಾಳಿ ಬಳಿಕ ಪಾಕಿಸ್ಥಾನ ಪ್ರಜೆಗಳು ಭಾರತ ತೊರೆಯುವಂತೆ ಕೇಂದ್ರ ಸರಕಾರ ಆದೇಶಿಸಿದ ಬೆನ್ನಲ್ಲೆ ರಂಷಾ ಮಕ್ಕಳೊಂದಿಗೆ ಪಾಕಿಸ್ಥಾನಕ್ಕೆ ತೆರಳಲು ಎ.29ರಂದು ವಾಘಾ ಗಡಿ ತಲುಪಿದ್ದರು.

ಈ ವೇಳೆ ರಂಷಾ ಪತಿ ಮನೆಯವರಿಂದ ಪೂರಕ ಪ್ರತಿಕ್ರಿಯೆ ಸಿಗಲಿಲ್ಲ ಎನ್ನಲಾಗಿದೆ. ಈಗ ಮೈಸೂರಿಗೆ ಮರಳಿರುವ ಆಕೆ ಪಾಕಿಸ್ಥಾನದ ವೀಸಾಕ್ಕಾಗಿ ಮತ್ತೆ ಎಫ್ ಆರ್‌ ಆರ್‌ ಒ ಮುಂದೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಭಾರತದ ಗಡಿಯಲ್ಲಿ ಬೇಹುಗಾರಿಕೆ ಮಾಡುತ್ತಿದ್ದ ಪಾಕಿಸ್ತಾನಿ ಯೋಧ ವಶಕ್ಕೆ..! ಭಾರತದ ಗಡಿ ಭದ್ರತಾ ಪಡೆಯಿಂದ ಮಾಹಿತಿ

ಭಾರತ ಪಾಕಿಸ್ತಾನ ನಡುವೆ ಅಂಚೆ – ಪಾರ್ಸೆಲ್ ಸೇವೆಯೂ ಸ್ಥಗಿತ..! ಭಾರತೀಯ ಅಂಚೆ ಇಲಾಖೆಯಿಂದ ಆದೇಶ..!

ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಚೆನ್ನೈಗೆ ಬಂದಿದ್ರಾ ಉಗ್ರರು..? ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ..!

See also  ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಗೆಳೆಯರ ಮಧ್ಯೆ ಗಲಾಟೆ! ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ! ಗೆಳೆಯ ಅರೆಸ್ಟ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget