Latestಕರಾವಳಿಕ್ರೈಂದೇಶ-ವಿದೇಶ

ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಚೆನ್ನೈಗೆ ಬಂದಿದ್ರಾ ಉಗ್ರರು..? ಶ್ರೀಲಂಕಾದಲ್ಲಿ ತಲೆಮರೆಸಿಕೊಂಡಿರುವ ಶಂಕೆ..!

312

ನ್ಯೂಸ್ ನಾಟೌಟ್: ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಹಿಂದೂಗಳ ನರಮೇಧ ನಡೆಸಿದ ಉಗ್ರರು ಇದೀಗ ಶ್ರೀಲಂಕಾದಲ್ಲಿ ರಲೆ ಮರೆಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉಗ್ರರು ಚೆನ್ನೈನಿಂದ ವಿಮಾನದಲ್ಲಿ ಲಂಕಾ ರಾಜಧಾನಿ ಕೊಲಂಬೊ ತಲುಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಲಂಕಾ ಅಧಿಕಾರಿಗಳಿಗೆ ನೀಡಿದ ಮಾಹಿತಿ ಆಧರಿಸಿ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIA) ತೀವ್ರ ಶೋಧ ನಡೆಸಲಾಯಿತು. ಕೊಲಂಬೊ ಪೊಲೀಸರು ಹಾಗೂ ವಿಶೇಷ ಭದ್ರತಾ ಪಡೆಗಳಿಂದ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.

ಇಂದು (ಮೇ.3) ಬೆಳಗ್ಗೆ 9:55ಕ್ಕೆ ಚೆನ್ನೈನಿಂದ ಹೊರಟಿದ್ದ ವಿಮಾನದಲ್ಲಿ ಭಯೋತ್ಪಾದಕರ ಕುರಿತು ಭಾರತೀಯ ಗುಪ್ತಚರ ಇಲಾಖೆ ಲಂಕಾ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶ್ರೀಲಂಕಾ ಏರ್‌ ಲೈನ್ಸ್‌ ನ UL-122 ವಿಮಾನವು 11:32ರ ವೇಳೆಗೆ ಕೊಲಂಬೊದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಭದ್ರತಾ ಅಧಿಕಾರಿಗಳು ತೀವ್ರ ಶೋಧ ನಡೆಸಿದರು. ಈ ಹಿನ್ನೆಲೆ ಸಿಂಗಾಪುರಕ್ಕೆ ತಲುಪಬೇಕಿದ್ದ ವಿಮಾನ ಸೇವೆಯಲ್ಲಿ ಕೊಂಚ ವ್ಯತ್ಯಯವಾಯಿತು ಎಂದು ಶ್ರೀಲಂಕಾದ ಏರ್‌ ಲೈನ್ಸ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮು-ಕಾಶ್ಮೀರದ ಅನಂತ್‌ ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ ನಲ್ಲಿ ಕಳೆದ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿದೆ. ಇದುವರೆಗೂ ಭದ್ರತಾಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಟಾರ್ಗೆಟ್‌ ಮಾಡಿ ಹತ್ಯೆ ಗೈದಿದ್ದರು. ಈ ಘಟನೆ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ತಂದೊಡ್ಡಿದೆ.

ಗಿಡುಗನಿಗೂ ಪಾಸ್‌ ಪೋರ್ಟ್‌ ಮಾಡಿಸಿದ ವ್ಯಕ್ತಿ..! ಇಲ್ಲಿದೆ ವೈರಲ್‌ ವಿಡಿಯೋ

See also  ಭದ್ರತಾ ಪಡೆಗಳ ಗುಂಡಿಗೆ 7 ನಕ್ಸಲರು ಬಲಿ..! ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡ ಪೊಲೀಸ್
  Ad Widget   Ad Widget   Ad Widget   Ad Widget