ಕರಾವಳಿ

ಮೈಮೇಲೆ ಅಣಬೆ ಇರುವ ಕಪ್ಪೆ ಎಲ್ಲಾದ್ರು ನೋಡಿದ್ದೀರಾ?ಕಾರ್ಕಳದ ಕೆರೆಯೊಂದರಲ್ಲಿ ವಿಚಿತ್ರ ಕಪ್ಪೆ..!ವಿಶ್ವದಲ್ಲಿ ಇಂತಹ ಜೀವಿ ಇದೇ ಮೊದಲು ಎಂದ ವಿಜ್ಞಾನಿಗಳು..!

ನ್ಯೂಸ್ ನಾಟೌಟ್:ಚಿತ್ರ ವಿಚಿತ್ರ ಜೀವಿಗಳನ್ನು ಅನ್ವೇಷಿಸಿ ಸಂಶೋಧಕರು ಪ್ರಪಂಚಕ್ಕೆ ಪರಿಚಯಿಸುತ್ತಲೇ ಇರ್ತಾರೆ.ಅನೇಕ ಬಾರಿ ನಾವು ಇಂತಹ ಸಂಶೋಧನೆಗಳಿಂದ ಅಚ್ಚರಿಪಟ್ಟಿದ್ದೂ ಇದೆ.ಇದೀಗ ಅಂತಹದ್ದೇ ಒಂದು ವಿಚಿತ್ರ ಘಟನೆ ನಮ್ಮ ಕರಾವಳಿಯಲ್ಲಿ ನಡೆದಿದೆ. ಅದೇನು ಗೊತ್ತಾ ಈ ರಿಪೋರ್ಟ್‌ ಓದಿ…

ಸಾಮಾನ್ಯವಾಗಿ ನೀವು ಹೆಚ್ಚಾಗಿ ಮಳೆಗಾಲದಲ್ಲಿ ಅಣಬೆಗಳನ್ನು ಕೊಳೆತ ವಸ್ತುಗಳ ಮೇಲೆ, ಮರ ಗಿಡಗಳ ಮೇಲೆ ಅಥವಾ ಮಳೆಗಾಲದಲ್ಲಿ ಹೆಚ್ಚಾಗಿ ನೋಡಿರ್ತೀರಿ.ಇದರಲ್ಲಿ ಒಂದೆರಡು ಅಣಬೆಗಳು ನಮಗೆ ತಿನ್ನಲು ಯೋಗ್ಯವಾಗಿರುತ್ತೆ.ಉಳಿದವುಗಳು ವಿಷಕಾರಿಯಾಗಿರುತ್ತೆ.ಸದ್ಯ ವಿಶ್ವ ವನ್ಯಜೀವಿ ನಿಧಿಯ ಸಂಶೋಧಕರು ಹಾಗೂ ಸ್ಥಳೀಯ ಯುವಕರ ತಂಡವೊಂದು ಪಕ್ಷಿಗಳನ್ನು ಅರಸಿ ಹೊರಟಿದ್ದ ವೇಳೆ ಆಕಸ್ಮಿಕವಾಗಿ ಈ ಹೊಸ ಕಪ್ಪೆಯ ಪ್ರಭೇದವೊಂದು ಕರ್ನಾಟಕದ ಉಡುಪಿ ಜಿಲ್ಲೆ ಕಾರ್ಕಳ ಸಮೀಪದ ಕೆರೆಯೊಂದರಲ್ಲಿ ಪತ್ತೆಯಾಗಿದೆ.

ವಿಚಿತ್ರವೆಂದರೆ ಜೀವಂತ ಉಭಯಚರಗಳ ಮೈಮೇಲೆ ಅಣಬೆ ಬೆಳೆದ ಪ್ರಸಂಗವೊಂದು ಎಲ್ಲೂ ದಾಖಲಾದ ಉದಾಹರಣೆ ಇಲ್ಲ ಎಂದು ವಿಜ್ಞಾನಿಗಳ ಮಾತುಗಳನ್ನು ಉಲ್ಲೇಖಿಸಿದ ವರದಿಯೊಂದು ಪ್ರಕಟಗೊಂಡಿದೆ. ‘ರೆಪ್ಟೈಲ್ಸ್‌ ಆ್ಯಂಡ್‌ ಆ್ಯಂಫಿಬಿಯನ್ಸ್‌’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಇದು ಪ್ರಕಟವಾಗಿದ್ದು ಬಹಳ ಆಸಕ್ತಿದಾಯಕವಾಗಿದೆ.ತನ್ನ ಮೈಮೇಲೆ ಅಣಬೆ ಬೆಳೆಯಲು ಅವಕಾಶ ಮಾಡಿಕೊಡುವ ವಿಶೇಷ ಜಾತಿಯ ಕಪ್ಪೆ ಇದಾಗಿದ್ದು ಸಂಶೋಧಕರು,ವಿಜ್ಞಾನಿಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.ಈ ಎಲ್ಲಾ ಅಚ್ಚರಿಗಳನ್ನು ನೋಡುವಾಗ ಪ್ರಕೃತಿಯ ಒಡಲಲ್ಲಿ ಇನ್ನು ಏನೇನು ವಿಸ್ಮಯಗಳಿವೆಯೋ ಅನ್ನಿಸತೊಡಗಿದೆ ಅಲ್ವ?

Related posts

ಬಿಬಿಎಸ್‌ 10ನಲ್ಲಿ ಡ್ರೋಣ್ ಪ್ರತಾಪ್ ಗೆಲ್ಲದಿದ್ರೆ ಅರ್ಧಮೀಸೆ,ಗಡ್ಡ ಬೋಳಿಸಿ,ಮೆಣಸನ್ನೂ ತಿನ್ತೀನಿ..!,ಕೊಟ್ಟ ಮಾತಿನಂತೆ ನಡೆದುಕೊಂಡು ವಿಡಿಯೋ ಹರಿಬಿಟ್ಟ ಕಡಬದ ಯುವಕ..!ಏನಿದು ವಿಚಾರ? ಇಲ್ಲಿದೆ ರಿಪೋರ್ಟ್..

ಪುತ್ತೂರಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ,ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು,ಅಭಿಮಾನಿಗಳು ಭಾಗಿ

ಚೆಂಬು:ಆನೆ ದಾಳಿ ಕೃಷಿ ನಷ್ಟ ಪ್ರದೇಶಕ್ಕೆ ಕೆಪಿಸಿಸಿ ರಾಜ್ಯ ವಕ್ತಾರ ಭೇಟಿ,ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಿರ್ದೇಶನದ ಮೇರೆಗೆ ಆಗಮನ