ದೇಶ-ಪ್ರಪಂಚ

14 ವರ್ಷದ ಬಾಲಕಿಗೆ ಮೊದಲ ಮುಟ್ಟಿನ ನೋವು!! ಹೆದರಿ ಆತ್ಮಹತ್ಯೆಗೆ ಶರಣು!!

ನ್ಯೂಸ್‌ ನಾಟೌಟ್‌ : ಮುಟ್ಟಿನ ಹೊಟ್ಟೆನೋವು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ಇರುತ್ತೆ. ಕೆಲವೊಬ್ಬರಿಗೆ ಆ ನೋವು ವಿಪರೀತವಾಗಿರಲೂ ಬಹುದು.ಹೀಗೆ 14 ವರ್ಷದ ಬಾಲಕಿಯೊಬ್ಬಳು ತನ್ನ ಮೊದಲ (Menstrual cycle) ಮುಟ್ಟಿನ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ  (Suicide) ಶರಣಾಗಿರುವ ಘಟನೆ ಮುಂಬೈನ ಮಲಾಡ್‌ನಲ್ಲಿ ನಡೆದಿದೆ.

ಈ ಬಾಲಕಿಗೆ ಮುಟ್ಟಿನ ಬಗ್ಗೆ ಮಾಹಿತಿ ತಿಳಿಯದೇ ಇರುವುದೇ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾರ್ಚ್ 26 ರಂದು ತಡರಾತ್ರಿ ಈ ಘಟನೆ ನಡೆದಿದ್ದು, ಮೊದಲ ಬಾರಿಗೆ ಋತುಸ್ರಾವವಾದಾಗ ನೋವಿನ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಿದ್ದಳು. ಇದಲ್ಲದೆ ನೋವಿನ ಜೊತೆಗೆ ಮಾನಸಿಕ ಒತ್ತಡವನ್ನು ಅನುಭವಿಸಿದ್ದಳು. ನೋವು ತಡೆದುಕೊಳ್ಳಲಾಗದೆ ಬಾಲಕಿ ಚಡಪಡಿಸಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ಏನೂ ಪ್ರಯೋಜನವಾಗಲಿಲ್ಲ.ಪೊಲೀಸರು ಇದೀಗ ಬಾಲಕಿಯ ಕುಟುಂಬ ಸದಸ್ಯರು ಮತ್ತು ಶಾಲೆ ,ಸ್ಥಳೀಯ ಸ್ನೇಹಿತರ ಹೇಳಿಕೆಗಳನ್ನು ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಸಲುವಾಗಿ ಆಕೆಯ ಖಿನ್ನತೆಯ ಬಗ್ಗೆಇನ್ನಷ್ಟು ತಿಳಿದುಕೊಳ್ಳಲು ಸ್ನೇಹಿತರ ಜೊತೆಗೆ ಮಾತನಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

Related posts

ಕೋತಿಯೊಂದಿಗೆ ಕೋತಿಯಾಟವಾಡಲು ಹೋಗಿ ಪ್ರಾಣ ಕಳ್ಕೊಂಡ,ಸೆಲ್ಫಿ ಗೀಳಿಗೆ ಮರುಳಾಗಿ ಪ್ರಪಾತಕ್ಕೆ ಬಿದ್ದ ಶಿಕ್ಷಕ!

ತೆಲಂಗಾಣದಲ್ಲಿ ಶಾಸಕರಾಗಿ ಆಯ್ಕೆಯಾದ 15 ಮಂದಿ ವೈದ್ಯರು!,ಯಾವೆಲ್ಲ ಪಕ್ಷದಿಂದ ಆಯ್ಕೆಯಾಗಿದ್ದಾರೆ ಗೊತ್ತಾ..?

ಚಿಂತಾಜನಕ ಸ್ಥಿತಿಯಲ್ಲಿರುವ ಆನೆಯ ರಕ್ಷಣೆಗೆ ಮುಂದಾದ ಭಾರತೀಯ ಸೇನೆ!