ರಾಜಕೀಯ

ಒಡಿಶಾ ಆರೋಗ್ಯ ಸಚಿವರ ಹತ್ಯೆ ಕೇಸ್:ಸಚಿವರನ್ನು ಕೊಲ್ಲುವ ಉದ್ದೇಶ ಎಎಸ್ ಐ ಗಿತ್ತು : ಒಡಿಶಾ ಪೊಲೀಸರು

ನ್ಯೂಸ್ ನಾಟೌಟ್ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ ಒಡಿಶಾದಲ್ಲಿ ನಡೆದಿತ್ತು.ಸಚಿವರೊಬ್ಬರನ್ನು ಎಎಸ್ ಐ ಗುಂಡಿಕ್ಕಿ ಕೊಂದಿರುವುದರ ಹಿಂದೆ ತನಿಖೆ ಚುರುಕುಗೊಂಡಿದೆ. ಇದರ ಮಧ್ಯೆ ಎಎಸ್ಐ ಮಾನಸಿಕ ಅಸ್ವಸ್ಥ ಎಂಬ ಸುದ್ದಿ ಹರಿದಾಡಿತ್ತು.ಇದೀಗ ಸ್ಪೋಟಕ ವಿಷಯವೊಂದು ರಿವೀಲ್ ಆಗಿದೆ.

‘ಆರೋಪಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗೋಪಾಲ್ ದಾಸ್‌ಗೆ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಅವರನ್ನು ಕೊಲ್ಲುವ ಸ್ಪಷ್ಟವಾದ ಉದ್ದೇಶವಿತ್ತು’ ಎಂದಿದ್ದಾರೆ. ಸಚಿವರ ಹತ್ಯೆಗೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿ ಒಡಿಶಾ ಪೊಲೀಸರು ಹೇಳಿದ್ದಾರೆ.ಸಚಿವರ ಮೇಲೆ ಎಎಸ್‌ಐ ಗುಂಡು ಹಾರಿಸಿದ ಸ್ಥಳದಲ್ಲಿದ್ದ ಬ್ರಜರಾಜನಗರ ಪೊಲೀಸ್ ಠಾಣೆಯ ಪ್ರಭಾರಿ ಇನ್‌ಸ್ಪೆಕ್ಟರ್ (ಐಐಸಿ) ಪ್ರದ್ಯುಮ್ನ ಕುಮಾರ್ ಸ್ಟೈನ್ ಅವರು ಈ ಸಂಬಂಧ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಕೊಲ್ಲುವ ಉದ್ದೇಶ ಸ್ಪಷ್ಟ?

‘ಜ. 29ರಂದು ಮಧ್ಯಾಹ್ನ 12.15ಕ್ಕೆ ಸಚಿವರ ಕಾರು ಕಟ್ಟಡವೊಂದರ ಬಳಿ ನಿಂತಿತು. ಕಾರಿನ ಮುಂಭಾಗ ಬಾಗಿಲು ತೆರೆದ ಬಳಿಕ ಸಚಿವರು ಕಾರಿನಿಂದ ಕೆಳಗಿಳಿದರು.ಎಎಸ್ಐ ಗೋಪಾಲ್ ದಾಸ್ ಅವರು,ಇದ್ದಕ್ಕಿದ್ದಂತೆಯೇ ಸಚಿವರ ಸಮೀಪಕ್ಕೆ ಬಂದು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಅವರತ್ತ ಗುರಿಯಿಟ್ಟು ಅತ್ಯಂತ ಸಮೀಪದಿಂದ ಗುಂಡು ಹಾರಿಸಿದರು.ಎಎಸ್‌ಐಗೆ ಸಚಿವರನ್ನು ಕೊಲ್ಲುವ ಉದ್ದೇಶ ಸ್ಪಷ್ಟವಾಗಿತ್ತು’ ಎಂದು ಬ್ರಜರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರದ್ಯುಮ್ನ ಕುಮಾರ್ ತಿಳಿಸಿದ್ದಾರೆ.

‘ಗುಂಡು ತಾಗುತ್ತಿದ್ದಂತೆಯೇ ಅವರು ನೆಲಕ್ಕೆ ಕುಸಿದುಬಿದ್ದರು. ದೇಹದಿಂದ ರಕ್ತ ಸುರಿಯಲಾರಂಭಿಸಿತು. ಅದೇ ವೇಳೆ ಆರೋಪಿಯು ಹಾರಿಸಿದ ಎರಡನೇ ಸುತ್ತಿನ ಗುಂಡು ನನ್ನ ಉಂಗುರದ ಬೆರಳಿಗೆ ತಾಗಿತು. ಸ್ಥಳದಲ್ಲಿದ್ದ ಕಾನ್‌ಸ್ಟೆಬಲ್ ಕೆ.ಸಿ. ಪ್ರಧಾನ ಅವರ ಜತೆಗೂಡಿ ಆರೋಪಿಯನ್ನು ಹಿಡಿದೆವು’ ಎಂದು ಅವರು ವಿವರಿಸಿದ್ದಾರೆ.

ಹತ್ಯೆ ಹಿಂದೆ ಪಿತೂರಿ ಶಂಕೆ:

ಆರೋಗ್ಯ ಸಚಿವರ ಹತ್ಯೆಯ ಹಿಂದೆ ಪಿತೂರಿ ಶಂಕೆ ವ್ಯಕ್ತಪಡಿಸಿರುವ ವಿರೋಧಪಕ್ಷಗಳು, ಸಿಬಿಐ ತನಿಖೆಗೆ ಆಗ್ರಹಿಸಿವೆ.’ಇದು ಆಳವಾದ ಪಿತೂರಿಯ ಭಾಗವಾಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ಆಗಲೇಬೇಕೆಂದು ಪಟ್ಟು ಹಿಡಿದಿವೆ.ಘಟನಾ ಸ್ಥಳದಲ್ಲಿ ಸಾಕಷ್ಟು ಪೊಲೀಸರನ್ನು ಏಕೆ ನಿಯೋಜಿಸಿರಲಿಲ್ಲ ಎಂದು ವಕೀಲರೂ ಆಗಿರುವ ಕಾಂಗ್ರೆಸ್ ಶಾಸಕಾಂಘ ಪಕ್ಷದ ನಾಯಕ ನರಸಿಂಗ್ ಅವರು ಆಕ್ರೋಶಿತರಾಗಿದ್ದಾರೆ.’ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡುವ ಒಂದು ದಿನ ಮುನ್ನ ಆರೋಪಿ ಎಎಸ್ಎಐಗೆ ಪಿಸ್ತೂಲ್ ನೀಡಲಾಗಿದೆ. ಹಾಗಾಗಿ, ಹತ್ಯೆಗಾಗಿ ಪಿತೂರಿ ನಡೆದಿರುವ ಶಂಕೆ ಇದೆ. ಎಂದು ಬಿಜೆಪಿಯ ವಿರೋಧಪಕ್ಷದ ನಾಯಕ ಜಯನಾರಾಯಣ ಮಿಶ್ರಾ ಆಗ್ರಹಿಸಿದ್ದಾರೆ.

Related posts

ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸಲು ಸಿದ್ಧ: ನಟ ಸಾಧು ಕೋಕಿಲಾ ಹೇಳಿದ್ದೇನು?

ಪತಿಯಿಂದ ಬೇರ್ಪಟ್ಟದ್ದೇಕೆ ಇಟಲಿ ಪ್ರಧಾನಿ..? ಈ ಬಗ್ಗೆ ಮೆಲೋನಿ ಹೇಳಿದ್ದೇನು?

ಪ್ರಧಾನಿ ಮೋದಿ ಬಗ್ಗೆ ಪಿಎಚ್‌ಡಿ ಮಾಡಿದ ಮುಸ್ಲಿಂ ಮಹಿಳೆ ಯಾರು? 8 ವರ್ಷಗಳ ಹಿಂದೆಯೇ ಮೋದಿಯನ್ನು ವಿಷಯವಾಗಿ ಆಯ್ಕೆ ಮಾಡಿಕೊಂಡದ್ದೇಕೆ ಈಕೆ? ಏನಿದೆ ಸಂಶೋಧನಾ ಪ್ರಬಂಧದಲ್ಲಿ?