ಕ್ರೈಂದೇಶ-ಪ್ರಪಂಚದೇಶ-ವಿದೇಶ

ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ ವೇಳೆ 7 ನಕ್ಸಲರು ಫಿನಿಶ್..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಏಳು ಮಾವೋವಾದಿಗಳು ಹತರಾದ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ. ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯ ನಂತರ ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿದಂತೆ ಏಳು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ.

ಹೆಚ್ಚಾಗಿ ನಕ್ಸಲೀಯರ ಓಡಾಟವಿರುವ ನಾರಾಯಣಪುರ-ಕಂಕೇರ್ ಗಡಿಯಲ್ಲಿರುವ ಅಬುಜ್ಮದ್ ಕಾಡಿನಲ್ಲಿ ಈ ಘರ್ಷಣೆ ನಡೆಯಿತು. ಅಲ್ಲಿ ಮೀಸಲು ಪೊಲೀಸ್ ಮಹಾನಿರ್ದೇಶನಾಲಯ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸಿಬ್ಬಂದಿ ಮಂಗಳವಾರ (ಎ.೩೦) ಬೆಳಿಗ್ಗೆ ಶಂಕಿತ ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿದರು. “ನಾರಾಯಣಪುರ-ಕಂಕೇರ್ ಗಡಿ ಪ್ರದೇಶದ ಅಬುಜ್ಮದ್‌ನಲ್ಲಿ ಇಂದು ಬೆಳಿಗ್ಗೆಯಿಂದ ಡಿಆರ್‌ಜಿ ಮತ್ತು ಎಸ್‌ಟಿಎಫ್ ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ. “ಎಲ್ಲಾ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಎನ್‌ಕೌಂಟರ್ ಇನ್ನೂ ನಡೆಯುತ್ತಿದೆ. ಸಾವುನೋವುಗಳ ಅಂತಿಮ ಸಂಖ್ಯೆಯನ್ನು ಈಗ ಹೇಳಲು ಆಗದು” ಎಂದು ಅಧಿಕಾರಿ ತಿಳಿಸಿದ್ದಾರೆ.

Related posts

ದುಬೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ..! ರಸ್ತೆ, ಹೆದ್ದಾರಿ ಜಲಾವೃತ, ವಿಮಾನಗಳ ಹಾರಾಟ ಸ್ಥಗಿತ, ಇಲ್ಲಿದೆ ವಿಡಿಯೋ

ಕರ್ಜಿಕಾಯಿ ತಿಂದದಕ್ಕೆ ಅಮಾನತ್ತಾದ ವಿಮಾನದ ಪೈಲಟ್‌ಗಳು ! ಅಂತದ್ದೇನಿತ್ತು ಆ ಫೊಟೋದಲ್ಲಿ..!

ಕೊಡಗು: ಅಬ್ಬಿಫಾಲ್ಸ್ ನಲ್ಲಿ ಮುರಿದು ಬಿದ್ದ ಭಾರೀ ಗಾತ್ರದ ಮರ! ಪ್ರವಾಸಿಗರು ಸ್ವಲ್ಪದರಲ್ಲೇ ಪಾರು!