ನ್ಯೂಸ್ ನಾಟೌಟ್ : ಸುಮಾರು 200 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಬುಧವಾರ(ಫೆ.5) ಮಧ್ಯಾಹ್ನ ಭಾರತದ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಈ ಮೊದಲು, ವಿಮಾನ ಬೆಳಿಗ್ಗೆ ಇಳಿಯುವ ನಿರೀಕ್ಷೆಯಿತ್ತು. ವರದಿಗಳ ಪ್ರಕಾರ, ಅಮೆರಿಕದ ಮಿಲಿಟರಿ ವಿಮಾನ ಸಿ-17 ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದ 205 ಅಕ್ರಮ ವಲಸಿಗರನ್ನು ವಾಪಾಸ್ ಭಾರತಕ್ಕೆ ಕರೆತರುತ್ತಿದೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಮಂಗಳವಾರ ರಾಜ್ಯ ವಲಸಿಗರಿಗಾಗಿ ವಿಮಾನ ನಿಲ್ದಾಣದಲ್ಲಿ ಕೌಂಟರ್ ಗಳನ್ನು ಸ್ಥಾಪಿಸಲಿದೆ ಎಂದು ಹೇಳಿದ್ದರು.
ಈ ಕುರಿತು ಮಾತನಾಡಿದ ಪಂಜಾಬ್ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅಮೆರಿಕ ಸರ್ಕಾರದ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಆ ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ ವಲಸಿಗರಿನ್ನು ಗಡೀಪಾರು ಮಾಡುವ ಬದಲು ಪೌರತ್ವ ನೀಡಬೇಕಾಗಿತ್ತು. ಅನೇಕ ಭಾರತೀಯರು ಕೆಲಸದ ಪರವಾನಗಿಗಳ ಮೇಲೆ ಅಮೆರಿಕಕ್ಕೆ ತೆಳಿದ್ದರು. ವಿಸಾ ಅವಧಿ ಮೀರಿತು, ಇದರಿಂದಾಗಿ ಅವರು ಅಕ್ರಮ ವಲಸಿಗರಾದರು ಎಂದಿದ್ದಾರೆ. ಅಮೆರಿಕದಲ್ಲಿ ವಾಸಿಸುವ ಪಂಜಾಬಿಗಳ ಕಾಳಜಿ ಮತ್ತು ಹಿತಾಸಕ್ತಿಗಳ ಕುರಿತು ಚರ್ಚಿಸಲು ಮುಂದಿನ ವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡುವುದಾಗಿ ಸಚಿವ ಕುಲದೀಪ್ ಸಿಂಗ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ.
Click
ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರ ಸಾವು..!
ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ ಗೂಡ್ಸ್ ಆಟೋ..! ದೂರು ನೀಡದ ಟೀಂ ಇಂಡಿಯಾದ ಮಾಜಿ ಕೋಚ್..!
ವಿಶ್ವದ ಪ್ರಭಾವಿ ರಾಷ್ಟ್ರಗಳ ಪಟ್ಟಿ ಬಿಡುಗಡೆ..! ಭಾರತಕ್ಕೆ ಎಷ್ಟನೇ ಸ್ಥಾನ..?
ಮಹಾ ಕುಂಭಮೇಳದಲ್ಲಿ ನರೇಂದ್ರ ಮೋದಿ ಪುಣ್ಯಸ್ನಾನ, ಸಂತರೊಂದಿಗೆ ಚರ್ಚಿಸಲಿರುವ ಪ್ರಧಾನಿ