ಕ್ರೈಂದೇಶ-ಪ್ರಪಂಚದೇಶ-ವಿದೇಶಬೆಂಗಳೂರುವಿಡಿಯೋವೈರಲ್ ನ್ಯೂಸ್

ರಾಹುಲ್‌ ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ..! ದೂರು ನೀಡದ ಟೀಂ ಇಂಡಿಯಾದ ಮಾಜಿ ಕೋಚ್‌..!

1

ನ್ಯೂಸ್ ನಾಟೌಟ್: ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕಾರಿಗೆ ಗೂಡ್ಸ್‌ ಅಟೋ ಗುದ್ದಿದ ಘಟನೆ ನಿನ್ನೆ ಸಂಜೆ(ಫೆ.4) ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ.

‌ ರಾಹುಲ್ ದ್ರಾವಿಡ್‌ ಸಂಜೆ 6:30ಕ್ಕೆ ಇಂಡಿಯನ್ ಎಕ್ಸ್‌ ಪ್ರೆಸ್‌ ಸಿಗ್ನಲ್‌ ನಿಂದ ಹೈಗ್ರೌಂಡ್ಸ್‌ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್‌ ಜಾಮ್‌ ಆಗಿತ್ತು. ಈ ವೇಳೆ ದ್ರಾವಿಡ್‌ ಕಾರನ್ನು ನಿಲ್ಲಿಸಿದ್ದಾಗ ಹಿಂದಿನಿಂದ ಗೂಡ್ಸ್‌ ರಿಕ್ಷಾ ಗುದ್ದಿದೆ.

https://x.com/kaniyar_spandan/status/1886799688390906050

ಗುದ್ದಿದ ನಂತರ ದ್ರಾವಿಡ್‌ ಕಾರಿನಿಂದ ಕೆಳಗಡೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನಂತರ ಅಟೋ ಚಾಲಕನನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೈ ಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ರಾಹುಲ್‌ ದ್ರಾವಿಡ್‌ ರಿಕ್ಷಾ ಚಾಲಕನ ಜೊತೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Click

ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್..!​ ಪೊಲೀಸ್ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ಸ್ಥಳೀಯರು..!

ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರ ಸಾವು..!