ನ್ಯೂಸ್ ನಾಟೌಟ್: 2025ರಲ್ಲಿ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಫೋರ್ಬ್ಸ್ (Forbes) ಬಿಡುಗಡೆ ಮಾಡಿದ್ದು, ಭಾರತ ಅಗ್ರ 10ರಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲವಾಗಿದೆ. ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಚೀನ ಮತ್ತು ರಷ್ಯಾ ಕ್ರಮವಾಗಿ ಅನಂತರದ 2 ಸ್ಥಾನದಲ್ಲಿವೆ. ಭಾರತ 12ನೇ ಸ್ಥಾನ ಪಡೆದುಕೊಂಡಿದೆ.
ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಅಂತಾರಾಷ್ಟ್ರೀಯ ಸಂಬಂಧ ಮತ್ತು ಮಿಲಿಟರಿ ಶಕ್ತಿಯನ್ನು ಆಧರಿಸಿ ಈ ಪಟ್ಟಿಯನ್ನು ತಯಾರು ಮಾಡಲಾಗಿದೆ ಎಂದು ಫೋರ್ಬ್ಸ್ ಹೇಳಿದೆ. ಅಮೆರಿಕ, ಚೀನ, ರಷ್ಯಾ, ಬ್ರಿಟನ್, ಜರ್ಮನಿ, ದಕ್ಷಿಣ ಕೊರಿಯಾ, ಫ್ರಾನ್ಸ್, ಜಪಾನ್, ಸೌದಿ ಅರೇಬಿಯಾ ಮತ್ತು ಇಸ್ರೇಲ್ ಕ್ರಮವಾಗಿ ಮೊದಲ 10 ಸ್ಥಾನದಲ್ಲಿವೆ.
ಅತೀಹೆಚ್ಚು ಜನಸಂಖ್ಯೆ, ಜಗತ್ತಿನಲ್ಲೇ 4ನೇ ದೊಡ್ಡ ಮಿಲಿಟರಿ ವ್ಯವಸ್ಥೆ, 5ನೇ ದೊಡ್ಡ ಆರ್ಥಿಕತೆ ಹೊಂದಿದೆ ಎಂದು ಹೇಳಲಾಗಿದ್ದರೂ ಭಾರತ ಅಗ್ರ 10ರಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
Click
ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ..! ಬೈಕ್ ಸವಾರ ಸಾವು..!
ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ ಗೂಡ್ಸ್ ಆಟೋ..! ದೂರು ನೀಡದ ಟೀಂ ಇಂಡಿಯಾದ ಮಾಜಿ ಕೋಚ್..!