ಕ್ರೈಂ

ಓವರ್‌ಟೆಕ್ ಮಾಡಿದ ಮಹಿಳೆ! ಜುಟ್ಟು ಹಿಡಿದು ಹಲ್ಲೆ ಮಾಡಿದ ನಿವೃತ್ತ ಯೋಧ! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವ ವೇಳೆ ವಾಹನ ಸವಾರಗಳ ಮಧ್ಯೆ ಜಗಳಗಳು ಆಗಿ ಹೊಡೆದಾಟ ಬಡೆದಾಟಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಹಾರಾಷ್ಟ್ರದ ನಾಗ್ಪುರದ ರಸ್ತೆಯಲ್ಲಿ ಮಾರ್ಚ್ ೧೮ ರಂದು ಮಹಿಳೆಯೊಂದಿಗೆ ಜಗಳಕ್ಕೆ ಇಳಿದು, ಆಕೆಯ ಜುಟ್ಟು ಎಳೆದು ಹಲ್ಲೆ ಮಾಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಬಿಎಸ್‌ಎಫ್‌ ನ ನಿವೃತ್ತ ಯೋಧನೊಬ್ಬ ಮಹಿಳೆ ತನ್ನ ಟ್ಯಾಕ್ಸಿಯನ್ನು ಓವರ್‌ಟೇಕ್ ಮಾಡಿದರು ಎಂಬ ವಿಚಾರವಾಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ವರದಿ ತಿಳಿಸಿದೆ.

ಆರೋಪಿ ಶಿವ ಶಂಕರ್ ಶ್ರೀವಾತ್ಸವ್ ಎಂಬಾತ ಜರಿಪಟ್ಕಾ ಪ್ರದೇಶದ ಭೀಮ್ ಚೌಕ್ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಮಹಿಳೆ ದ್ವಿಚಕ್ರ ವಾಹನದಲ್ಲಿ ಕಾರನ್ನು ಹಿಂದಿಕ್ಕಿ ಹೋಗುತ್ತಾಳೆ. ಇದರಿಂದ ಕೋಪಗೊಂಡ ಚಾಲಕ ಮಹಿಳೆ ಸ್ಕೂಟರ್‌ಗೆ ಮೆಲ್ಲನೇ ಡಿಕ್ಕಿ ಹೊಡೆಯುತ್ತಾನೆ, ಸ್ಕೂಟರ್ ಬೀಳುವಷ್ಟರಲ್ಲಿ ಆಕೆ ಗಾಡಿಯನ್ನು ನಿಯಂತ್ರಿಸುತ್ತಾಳೆ.

ಈ ಘಟನೆಯಿಂದ ಕೋಪಗೊಂಡ ಆಕೆ ಕಾರಿನ ಪೋಟೋ ಕ್ಲಿಕ್ಕಿಸಿಕೊಳ್ಳಲು ಮೊಬೈಲ್ ತೆಗೆದ ಕೂಡಲೇ ಯೋಧ ಕಾರಿನಿಂದ ಇಳಿದು ಮಹಿಳೆಯನ್ನು ಎಳೆದು ಹೊಡೆದಿದ್ದಾನೆ. ಅಲ್ಲದೇ ಆಕೆಯ ಕೂದಲನ್ನು ಹಿಡಿದು ಹಲ್ಲೆ ಮಾಡಿದ್ದಾನೆ. ಆತನ ಮೇಲೆ ಪ್ರಕರಣ ದಾಖಲಾಗಿದ್ದು, ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಪುತ್ತೂರು: ರಿಕ್ಷಾ ಏರಿದ ಹುಡುಗಿ ಜೊತೆ ಅಸಭ್ಯ ವರ್ತನೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?

2016ರಲ್ಲಿ ಉಳ್ಳಾಲದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ, ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ