ಕ್ರೈಂದೇಶ-ಪ್ರಪಂಚ

ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 9 ಮಂದಿ ದಾರುಣ ಅಂತ್ಯ!

ನ್ಯೂಸ್ ನಾಟೌಟ್ :   ಮಂಗಳವಾರ ಪಟಾಕಿ ಸ್ಫೋಟದಿಂದಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ  ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಎಗ್ರಾ ಬ್ಲಾಕ್‌ನಲ್ಲಿರುವ ಅಕ್ರಮ ಪಟಾಕಿ ಘಟಕದಲ್ಲಿ ವರದಿಯಾಗಿದೆ.

ಬೆಳಗ್ಗೆ 11.35ಕ್ಕೆ ಸಂಭವಿಸಿದ ಸ್ಫೋಟದ ಪರಿಣಾಮ ಕಾರ್ಖಾನೆ ಕುಸಿದುಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳ-ಒಡಿಶಾ ಗಡಿಯಲ್ಲಿರುವ ಖಾಡಿಕುಲ್ ಗ್ರಾಮದಲ್ಲಿ ಕೃಷ್ಣಪಾದ ಬಾಗ್ ಅಲಿಯಾಸ್ ಭಾನು ಬಾಗ್ ಎಂಬ ವ್ಯಕ್ತಿಯ ಮನೆಯಲ್ಲಿ  ಪಟಾಕಿ ಕಾರ್ಖಾನಗೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಅಕ್ರಮ ಪಟಾಕಿ ಕಾರ್ಖಾನೆಯ ಮೇಲೆ ಕಳೆದ ತಿಂಗಳು ದಾಳಿ ನಡೆಸಲಾಗಿದ್ದು, ಅದನ್ನು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರ್ಬಾ ಮೇದಿನಿಪುರ ಪೊಲೀಸ್ ವರಿಷ್ಠಾಧಿಕಾರಿ ಕೆ ಅಮರನಾಥ್ ತಿಳಿಸಿದ್ದಾರೆ ಎನ್ನಲಾಗಿದೆ.

Related posts

Titanic ಸಬ್​ಮೆರಿನ್ ದುರಂತ! ಟೈಟಾನಿಕ್ ಸಿನಿಮಾ ರಿ-ರಿಲೀಸ್​ಗೆ ಮುಂದಾದ ನೆಟ್​ಫ್ಲಿಕ್ಸ್!​ ನೆಟ್ಟಿಗರು ಟೀಕಿಸಿದ್ದೇಕೆ?

ಬೆಂಗಳೂರಿನಲ್ಲಿ ಮಹಿಳೆಯನ್ನು 30 ಪೀಸ್ ಮಾಡಿ ಬರ್ಬರ ಹತ್ಯೆ, ಸಿಂಗಲ್ ಡೋರ್ ಪ್ರಿಡ್ಜ್ ನಿಂದ ಹೊರ ಬರುತ್ತಿತ್ತು ದುರ್ನಾತ..!

ತೊಡಿಕಾನ: ಅನಾರೋಗ್ಯದಿಂದ ಯುವಕ ನಿಧನ