ಕರಾವಳಿಕೊಡಗುಸುಳ್ಯ

ಇಂದು ಕೃಷಿ ಆಧಾರಿತ ಕೌಶಲ್ಯಗಳ ತರಬೇತಿ ಕೇಂದ್ರದ ಉದ್ಘಾಟನೆ

ನ್ಯೂಸ್‌ ನಾಟೌಟ್‌: ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿಸರ್ಗ ರಂಗ ವೇದಿಕೆಯಲ್ಲಿ ಫೆ. 10ರಂದು ಬೆಳಗ್ಗೆ 9 ಗಂಟೆಗೆ ಕೃಷಿ ಆಧಾರಿತ ಕೌಶಲ್ಯಗಳ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭ ನಡೆಯಲಿದೆ.

ಕಾರ್ಯಕ್ರಮವನ್ನು ಸಂಪಾಜೆ ಎಸ್ಟೇಟ್‌ನ ಇಂದಿರಾ ದೇವಿಪ್ರಸಾದ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಪಾಜೆಯ ಎಸ್‌.ಜೆ. ಫಾರ್ಮ್‌ನ ಕರ್ನಲ್ ಶರತ್ ಭಂಡಾರಿ, ಮಡಿಕೇರಿ ನಬಾರ್ಡ್‌ನ ಡಿಡಿಎಂ ರಮೇಶ್‌ ಬಿ.ವಿ. ಆಗಮಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಸಿಮೇಪ್‌ನ ಹಿರಿಯ ವಿಜ್ಞಾನಿಗಳಾದ ಡಾ. ದಿನೇಶ್‌ ಎ. ನಾಗೇಗೌಡ, ಡಾ. ಚೆನ್ನಯ್ಯ ಹಿರೇಮಠ್‌, ಡಾ.ಎನ್‌.ಡಿ. ಯೋಗೇಂದ್ರ, ಭಾಸ್ಕರನ್‌ ಮತ್ತು ಜಿ.ಎನ್‌. ಜಯಚಂದ್‌ ಆಗಮಿಸಲಿದ್ದಾರೆ. ಸಂಪಾಜೆ ಎಜ್ಯುಕೇಶನ್‌ ಸೊಸೈಟಿಯ ಅಧ್ಯಕ್ಷ ಕೆ.ಜಿ. ರಾಜಾರಾಮ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮ ಸಂಪಾಜೆ ಎಜ್ಯುಕೇಶನ್‌ ಸೊಸೈಟಿ (ರಿ.), ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು, ಚೆಂಬು ಗ್ರಾಮ ಪಂಚಾಯತ್, ಕೊಡಗು-ಸಂಪಾಜೆ ಗ್ರಾಮ ಪಂಚಾಯತ್, ಸಂಪಾಜೆ ಗ್ರಾಮ ಪಂಚಾಯತ್ ದ.ಕ., ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ-ಕೊಡಗು, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಂಪಾಜೆ ದ.ಕ. ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಅರಂತೋಡು, ದಕ, ಮತ್ತು ಲಯನ್ಸ್‌ ಕ್ಲಬ್‌ ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರೀಯ ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳ ಸಂಶೋಧನಾ ಸಂಸ್ಥೆ, ಬೆಂಗಳೂರು ಭಾರತ ಸರಕಾರ (CIMAP) ಇದರ ಸಹಯೋಗದೊಂದಿಗೆ ನಡೆಯಲಿದೆ.

Related posts

ಮಂಗಳೂರು ಸ್ಫೋಟ ಪ್ರಕರಣ : ಆರೋಪಿ ಶಾರೀಕ್ ಗುರುತು ಪತ್ತೆ

ಎರಡು ತಿಂಗಳಿಂದ ಅಂಗನವಾಡಿಗೆ ಸಿಕ್ಕಿಲ್ಲ ಆಹಾರ ಧಾನ್ಯ..!ಮಕ್ಕಳು, ಕಾರ್ಯಕರ್ತೆಯರು,ಗರ್ಭಿಣಿಯರ ಸಮಸ್ಯೆಯನ್ನು ಕೇಳುವವರಾರು?

ದೈವ ನರ್ತಕ ಬಿ. ಜಯರಾಮ ಬೊಳಿಯಮಜಲು ಅವರಿಗೆ ಜಿಲ್ಲಾಮಟ್ಟದ ಸೇವಾರತ್ನ ಪ್ರಶಸ್ತಿ