ಕರಾವಳಿಕೊಡಗು

ಕೋಲದಲ್ಲಿ ಸ್ಪೀಕರ್‌ ಖಾದರ್ ಭಾಗಿ-ಮುಂದುವರಿದ ಪರ-ವಿರೋಧದ ಚರ್ಚೆ;ನನ್ನ ಹರಕೆಯ ಕೋಲ ಸೇವೆಯಲ್ಲಿ ಪಾಲ್ಗೊಂಡಿದ್ದರು-ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಸ್ಪಷ್ಟನೆ

ನ್ಯೂಸ್ ನಾಟೌಟ್: ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ರವಿವಾರ ರಾತ್ರಿ ನಡೆದ ಕೋಲ ಸೇವೆಯಲ್ಲಿ ವಿಧಾನಸಭಾಧ್ಯಕ್ಷ ಯು. ಟಿ ಖಾದರ್ ಭಾಗವಹಿಸಿದ್ದರು.ಪ್ರಸ್ತುತ ಈ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಈ ವಿಚಾರಕ್ಕೆ ಸಂಬಂಧಿಸಿ ಕೆಲವರು ಖಾದರ್ ಅವರೇ ಕೋಲ ಸೇವೆ ನೀಡಿದ್ದಾರೆ ಎಂದು ಕೆಲವರು ಅನುಮಾನಿಸಿ ಸಾಮಾಜಿಕ ಜಾಲತಾಣದ ಪೇಜ್‌ಗಳಲ್ಲಿವಿರೋಧ ವ್ಯಕ್ತಪಡಿಸಿದ್ರು.ಮಾತ್ರವಲ್ಲ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ್ದರು.ಇದಕ್ಕೆ ಯುಟಿ ಖಾದರ್ ಅವರು ತಿರುಗೇಟು ನೀಡುತ್ತಾ ‘ಎಲ್ಲೋ ಕುಳಿತು ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ. ಕೆಲಸ ಮಾಡುವವರು ಇತಿಹಾಸ ಬರೆಯಲು ಸಾಧ್ಯ. ನಾನದನ್ನು ಮಾಡುತ್ತಿದ್ದೇನೆ. ಯಾರೋ ಒಬ್ಬರು ಜಾಲತಾಣದಲ್ಲಿ ಎನೋ ಬರೆದ ಮಾತ್ರಕ್ಕೆ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎಂದಿದ್ದರು.

ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರು, ನನ್ನ ಹರಕೆಯ ಕೋಲ ಸೇವೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ ಖಾದರ್ ಅವರು ಕೂಡ ನಿನ್ನೆ ಹೇಳಿಕೆಯೊಂದನ್ನು ನೀಡುತ್ತಾ” ನಮ್ಮ ಬ್ಲಾಕ್ ಅಧ್ಯಕ್ಷರು ಕರೆದಿದ್ದರು , ಹೋಗಿದ್ದೆ.. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಹೋಗಿದ್ದೆ ಇದರಲ್ಲಿ ತಪ್ಪೇನಿದೆ” ಎಂದು ಪ್ರಶ್ನೆ ಮಾಡಿದ್ದರು.

ಕರಾವಳಿ ದೈವಾರಾಧನೆ ಬಗ್ಗೆ ಗೌರವ ಹೊಂದಿರುವ ಯುಟಿ ಖಾದರ್ ಅವರು ವಿಶೇಷವಾಗಿ ಕರಾವಳಿಯವರು.ಹೀಗಾಗಿ ವಿಧಾನಸೌಧದಲ್ಲಿಯೂ ಈ ಹಿಂದೆ ದೈವ ದೇವರ ಬಗ್ಗೆ ರಾಜಕಾರಣಿಯೊಬ್ಬರು ಅಣಕಿಸಿ ಮಾತನಾಡಿದ್ದಕ್ಕೆ ತಿರುಗೇಟು ನೀಡಿದ್ದರು.ತುಳು ನಾಡಿನ ದೈವದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಬುದ್ದಿವಾದದ ಹೇಳಿಕೆ ತುಳುನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಬಳಿಕ ಅದೇ ರಾಜಕಾರಣಿ ಎಲೆಕ್ಷನ್‌ನಲ್ಲಿ ಸೋತು ಹೋದರು.ಯುಟಿ ಖಾದರ್ ಅವರು ಸ್ಪೀಕರ್‌ ಆದರು.ಯುಟಿ ಖಾದರ್ ಅವರು ಈ ಹುದ್ದೆಗೇರಿದ ಬಳಿಕ ಈ ಹಿಂದೆ ವಿಧಾನಸೌಧದಲ್ಲಿ ಮಾತನಾಡಿಕೊಂಡಿದ್ದ ವಿಡಿಯೋ ಕ್ಲಿಪ್ಪಿಂಗ್ಸ್ ಸಕತ್‌ ವೈರಲಾಗಿತ್ತು.

Related posts

ಅಜ್ಜಾವರ: 7ನೇ ತರಗತಿ ವಿದ್ಯಾರ್ಥಿ ದಿಢೀರ್ ನಾಪತ್ತೆ, ಪೋಷಕರಿಂದ ಹುಡುಕಿಕೊಡುವಂತೆ ಮನವಿ

ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆಯೇ ಇಲ್ಲ:ಭಜರಂಗದಳ ನಿಷೇಧ ವಾಪಸ್ ಇಲ್ಲ,ಕಾಂಗ್ರೆಸ್ ನಿರ್ಧಾರ

ಸುಳ್ಯ : ಮಾರ್ಚ್ 7 ರಂದು (ನಾಳೆ) ವಿದ್ಯುತ್ ವ್ಯತ್ಯಯ