ಪುತ್ತೂರು

ಈಶ್ವರಮಂಗಲ: ಪಿಕಪ್‌ನಲ್ಲಿ ಅಕ್ರಮ ಗೋ ಸಾಗಾಟ, ವಾಹನ ತಡೆದು ಗೋವುಗಳನ್ನು ರಕ್ಷಿಸಿದ ಪೊಲೀಸರು, ಗೋಕಳ್ಳರು ಎಸ್ಕೇಪ್‌

ನ್ಯೂಸ್ ನಾಟೌಟ್: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಶನಿವಾರ (ನ.9ರ ) ನಡೆದಿದೆ.

ಗೋ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಈಶ್ವರಮಂಗಲ ಪೊಲೀಸರು ಪಿಕಪ್‌ ವಾಹನವನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪಿಕಪ್ ವಾಹನದಲ್ಲಿ 4 ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಈಶ್ವರಮಂಗಲ ಪೊಲೀಸರು ತಡೆದು ವಾಹನ ವಶಕ್ಕೆ ಪಡೆದಿದ್ದಾರೆ. ವಾಹನದಿಂದ ಗೋವುಗಳನ್ನು ಕೆಳಗಿಳಿಸಿ ಕಾರ್ಯಕರ್ತರು ಉಪಚರಿಸಿದ್ದಾರೆ. ಕರುವೊಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Related posts

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬೆಂಗಳೂರು ಹೊಟೇಲ್‌ ನಲ್ಲಿ ಸ್ಥಳ ಮಹಜರು..! ಈ ಬಗ್ಗೆ ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದ್ದೇನು..?

ಪುತ್ತೂರು: ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಗೆ ಅಪ್ರಾಪ್ತನಿಂದ ಚಾಕು ಇರಿತ ..? ಇಲ್ಲಿದೆ ವಿಡಿಯೋ

ಪುತ್ತೂರು: ಕುಂಬ್ರ ಬಳಿ ಭೀಕರ ಅಪಘಾತ, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವು