ಕರಾವಳಿರಾಜಕೀಯಸುಳ್ಯ

ತಾಕತ್ತಿದ್ದರೆ ಆರ್‌ಎಸ್‌ಎಸ್‌ ನಿಷೇಧ ಮಾಡಿ ಬಿಜೆಪಿ ಸವಾಲ್‌,ಶಾಂತಿ ಕದಡಿ ನೋಡಿ ಸಂವಿಧಾನದ ಶಕ್ತಿ ತೋರಿಸ್ತೀವಿ: ಪ್ರಿಯಾಂಕ್ ಖರ್ಗೆ ತಿರುಗೇಟು

ನ್ಯೂಸ್ ನಾಟೌಟ್: ಆರ್‌ಎಸ್‌ಎಸ್‌ ನಿಷೇಧ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ನಿಗಿನಿಗಿ ಕೆಂಡವಾಗಿದೆ. ತಾಕತ್ತಿದ್ದರೆ ಆರ್‌ಎಸ್‌ಎಸ್‌ ನಿಷೇಧ ಮಾಡಿ ಬಿಜೆಪಿ ಸವಾಲ್‌ ಹಾಕಿದೆ. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿ ನೋಡಿ, ಆಗ ಬಾಬಾ ಸಾಹೇಬರ ಸಂವಿಧಾನದ ಶಕ್ತಿಯನ್ನು ತೋರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್‌, ಬಿಜೆಪಿಯವರು ಪದೇ ಪದೇ ಆರ್‌ಎಸ್‌ಎಸ್‌ ಅನ್ನು ಬ್ಯಾನ್ ಮಾಡಿ ನೋಡಿ ಎನ್ನುತ್ತಿದ್ದಾರೆ. ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲ, ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೆಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ನಡೆಸುವ ಪ್ರಯತ್ನ ಮಾಡಿ ನೋಡಿ, ಆಗ ಅಂಬೇಡ್ಕರ್ ಅವರ ಸಂವಿಧಾನದ ಪವರ್‌ ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.

Related posts

ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್‌ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?

ಸೌಜನ್ಯ ಕೊಲೆಗಾರರಿಗೆ 48 ದಿನದೊಳಗೆ ಶಿಕ್ಷೆಯಾದರೆ ಅಗೆಲು ಸೇವೆ,  ಸ್ವಾಮಿ ಕೊರಗಜ್ಜನ ಎದುರು ಹರಕೆ ಹೊತ್ತ ಸೌಜನ್ಯ ಅಣ್ಣ ತಮ್ಮಂದಿರ ಬಳಗ

ಕಲ್ಲೆಂಚಿಪಾದೆ: ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ, ತೀವ್ರ ಹಾನಿ