ವಿಟ್ಲ : ಅಳಿಕೆ ಗ್ರಾಮ ಕಲ್ಲೆಂಚಿಪಾದೆ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆಗೆ ಭಾರಿ ಹಾನಿಯಾದ ಘಟನೆ ನಡೆದಿದೆ.
ಅಳಿಕೆ ಗ್ರಾಮ ಕಲ್ಲೆಂಚಿಪಾದೆ ಶೀನ ನಲಿಕ ಅವರ ಮನೆಗೆ ಗುರುವಾರ ರಾತ್ರಿ ಭಾರೀ ಸಿಡಿಲು ಬಡಿದಿದ್ದು,ಇದರಿಂದ ಶೀನ ನಲಿಕ ಅವರ ಪತ್ನಿ ಸುಶೀಲಾ, ಮಕ್ಕಳಾದ ವಿದ್ಯಾ ಮತ್ತು ವಿನಯ ಗಾಯಗೊಂಡಿದ್ದಾರೆ. ಮನೆಯ ಗೋಡೆಯನ್ನು ಸೀಳಿಕೊಂಡು ಸಿಡಿಲು ಪ್ರವೇಶಿಸಿದ್ದರಿಂದ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ವಿದ್ಯುತ್ ವಯರಿಂಗ್ ಹಾಗೂ ವಿವಿಧ ಉಪಕರಣಗಳು ಸುಟ್ಟುಹೋಗಿದೆ.