Uncategorized

‘ಹಿಂದೂ ವೋಟ್ ಬೇಕಿದ್ದರೆ ಸೋನಿಯಾ ಗಾಂಧಿ ಅಯೋಧ್ಯೆಗೆ ಬರಲಿ, ಮುಸ್ಲಿಮರ ವೋಟ್ ಬೇಕಾದ್ರೆ ಮೆಕ್ಕಾಕ್ಕೆ ಹೋಗ್ಲಿ- ಯತ್ನಾಳ್ ಹೀಗಂದಿದ್ಯಾಕೆ?

ನ್ಯೂಸ್ ನಾಟೌಟ್ :  ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಹೀಗಾಗಿ ಆಮಂತ್ರಣ ಪತ್ರಿಕೆಯನ್ನು ತಲುಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮ‌ಮಂದಿರ ಟ್ರಸ್ಟ್ ಆಹ್ವಾನ ಮಾಡಿವೆ. ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ ದೇಶದ ಬಗ್ಗೆ ಕಳಕಳಿ ಇದ್ದರೆ ಹಿಂದೂಗಳ ವೋಟ್ ಬೇಕಾದರೆ ಅವರು ಬರುತ್ತಾರೆ. ಸೋನಿಯಾ ರಾಮ ಮಂದಿರಕ್ಕೆ ಬರೋದು ಓಟಿಗಾಗಿ ಅನ್ನೋದನ್ನ ಮರೀಬೇಡಿ. ಅಕಸ್ಮಾತ್ ಅವರಿಗೆ ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ’’ ಎಂದು ಹೇಳಿದ್ದಾರೆ.

“25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಕಪಿಲ್ ಸಿಬಲ್ ಅವರಿಂದ ಹಿಡಿದು ಕಾಂಗ್ರೆಸ್ ನ 27 ವಕೀಲರು ವಾದ ಮಾಡಿದ್ದಾರೆ. ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಕಪೀಲ್ ಸಿಬಲ್ ವಾದ ಮಾಡಿದ್ದರು. ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯೋದು ನಮ್ಮ ಧರ್ಮ‌. ಅದಕ್ಕಾಗಿಯೇ ನಮ್ಮವರು ಹೋಗಿ ಕರೆದಿದ್ದಾರೆ. ಬರೋದು ಬಿಡೋದು ಅವರಿಗೆ ಬಿಟ್ಟದ್ದು” ಎಂದು ಯತ್ನಾಳ್ ಹೇಳಿದ್ರು.

“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ದೇಶದ ಹಿಂದೂಗಳ ಮನಸ್ಸಿನಲ್ಲಿ ಸಂಕಲ್ಪವಿತ್ತು. ಅದು ಈಗ ನೆರವೇರಿದೆ. ಶತಮಾನಗಳ ಸಮಸ್ಯೆಗಳನ್ನು ನೀಗಿಸಿಕೊಂಡು ಹೇಗೆ ರಾಮಮಂದಿರ ನಿರ್ಮಾಣವಾಗಿದೆಯೋ ಹಾಗೆಯೇ ಮುಂದಿನ ದಿನಗಳಲ್ಲಿ ಕಾಶಿ ಮತ್ತು ಮಥುರಾ ದೇವಸ್ಥಾನಗಳು ಮುಕ್ತವಾಗಬೇಕು’’ ಎಂದು ಯತ್ನಾಳ್ ಆಶಯ ವ್ಯಕ್ತ ಪಡಿಸಿದ್ರು.

Related posts

ಮೇ 3ಕ್ಕೆ ರಾಜ್ಯಕ್ಕೆ ಸಚಿವ ಅಮಿತ್ ಶಾ ಭೇಟಿ

ಓಮೈಕ್ರಾನ್: ಕರ್ನಾಟಕದಲ್ಲಿ ಡಿ.28ರಿಂದ ರಾತ್ರಿ ಕರ್ಫ್ಯೂ

ಅರ್ಜುನ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಪಟು ಹೊನ್ನಪ್ಪ ಗೌಡ ಅವರನ್ನು ಭೇಟಿಯಾದ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು