ದೇಶ-ಪ್ರಪಂಚರಾಜಕೀಯ

ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸಲು ಸಿದ್ಧ: ನಟ ಸಾಧು ಕೋಕಿಲಾ ಹೇಳಿದ್ದೇನು?

ನ್ಯೂಸ್‌ ನಾಟೌಟ್‌ : ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ (Sadhu Kokila) ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ ಎನ್ನಲಾಗಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ಒತ್ತಾಯಗಳು ಕೇಳಿ ಬಂದಿವೆ.ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೆ ಟಿಕೆಟ್ ನೀಡುವಂತೆ ಮನವಿ ಕೂಡ ಮಾಡಿದೆ.

ಈ ಕುರಿತಂತೆ ಮಾತನಾಡಿರುವ ಸಾಧು ಕೋಕಿಲಾ, ನಾನು ಒಂದು ಧರ್ಮಕ್ಕೆ ಸೀಮಿತ ಆಗಿಲ್ಲ.ಬೆಂಗಳೂರಿನಲ್ಲಿ ನನ್ನನ್ನ ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ.ನನ್ನ ಹಿನ್ನಲೆ ಜನರಿಗೆ ಗೊತ್ತಿದೆ.ನನ್ನನ್ನು ಯಾವ ಜಾತಿಗೂ ಸೇರಿಸಬೇಡಿ.ನಾನು ಎಲ್ಲರಿಗೂ ಸೇರಿದವನು.ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ.ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ.

ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ ಗೊತ್ತಿಲ್ಲ ಪಕ್ಷ ಏನ್ ಮಾಡುತ್ತೋ.ಯಾರಿಗೆ ಟಿಕೆಟ್ ಕೊಡ್ತಾರೆ ಗೊತ್ತಿಲ್ಲ’ ಎಂದಿದ್ದಾರೆ.ಅಲ್ಲದೇ, ಪಕ್ಷದ ತೀರ್ಮಾನಕ್ಕೆ ನಾನು ಬದ್ದ.ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ.ಟಿಕೆಟ್ ಕೊಟ್ಟರೆ 100% ಕಾಂಗ್ರೆಸ್ ನಿಂದ ನಿಲ್ತೀನಿ ಎನ್ನುವ ವಿಶ್ವಾಸದ ಮಾತುಗಳನ್ನೂ ಸಾಧು ಕೋಕಿಲ ಆಡಿದ್ದಾರೆ.

Related posts

ವರನಿಲ್ಲದೇ ಸಪ್ತಪದಿ ತುಳಿದ ವಧು,ಹಾಗಾದ್ರೆ ಇದು ಹೇಗೆ ಸಾಧ್ಯ ಆಯ್ತು..ಇಲ್ಲಿದೆ ಡಿಟೇಲ್ಸ್..

ತೆಲಂಗಾಣದಲ್ಲೂ ಶುರುವಾಯ್ತಾ ಮಹಿಳೆಯರ ಉಚಿತ ಬಸ್ ಪ್ರಯಾಣ..?​ ಯೋಜನೆ ಜಾರಿಗೂ ಮುನ್ನ ತೆಲಂಗಾಣದ ಅಧಿಕಾರಿಗಳು ಕರ್ನಾಟಕಕ್ಕೆ ಬಂದದ್ದೇಕೆ?

ಆಧಾರ್ ಲಿಂಕ್ ಆಗಿರುವ ಫೋನ್ ತನ್ನಿ ಓಟಿಪಿ ಬರುತ್ತೆ ಅಂದ್ರೆ ಈ ಅಜ್ಜ ತಂದಿದ್ದೇನು ಗೊತ್ತಾ?ಫೋನ್ ಕೈಯಲ್ಲಿರೋದನ್ನು ನೋಡಿ ಆಧಾರ್‌ ಕೇಂದ್ರದಲ್ಲಿದ್ದ ಯುವತಿ ಶಾಕ್ ಆಗಿದ್ದೇಕೆ?