Uncategorized

ಶೌಚಾಲಯಕ್ಕೆ ಹೋದ ಹೆಂಡತಿಯನ್ನೇ ಮರೆತು ಹೋದ ಗಂಡ..!

ನ್ಯೂಸ್ ನಾಟೌಟ್: ಗಂಡಸರು ಅನೇಕ ವಿಚಾರದಲ್ಲಿ ಮರೆಯುವಿಕೆಯನ್ನು ಪ್ರದರ್ಶನ ಮಾಡುವುದುಂಟು. ಮನೆಯ ಕೆಲಸಗಳನ್ನು ಮರೆತು ಹೋಗುವುದುಂಟು. ಅದರಲ್ಲೂ ಹೆಂಡತಿ ಮನೆಗೆ ತರಲು ಹೇಳಿದ ವಸ್ತುಗಳನ್ನು ತರಲು ಮರೆತು ಹೋಗಿ ಮನೆಗೆ ಬಂದಾಗ ಬೈಗುಳ ತಿನ್ನುವುದುಂಟು. ಆದರೆ ಇಲ್ಲೊಬ್ಬ ಅಸಾಮಿ ಕಾರಿನಲ್ಲಿ ಹೆಂಡತಿ ಜತೆಗೆ ಲಾಂಗ್ ಟ್ರಿಪ್ ಹೋಗುವ ವೇಳೆ ಅರ್ಧದಾರಿಯಲ್ಲಿ ಹೆಂಡತಿಯನ್ನೇ ಮರೆತು ಬಿಟ್ಟು ಹೋದ ವಿಚಿತ್ರ ಘಟನೆ ವರದಿಯಾಗಿದೆ. ಗಂಡನ ಈ ವಿಚಿತ್ರ ಮರೆವಿನಿಂದಾಗಿ ತಡರಾತ್ರಿ ಹೆಂಡತಿ 20 ಕಿ.ಮೀ. ನಡೆದುಕೊಂಡೇ ಬಂದು ಇತರರ ಸಹಾಯದಿಂದ ವಾಪಸ್ ಮನೆ ಸೇರಿದ ಹಾಸ್ಯ ಪ್ರಸಂಗ ನಡೆದಿದೆ.

ಥಾಯ್ಲೆಂಡ್‌ನ ದಂಪತಿಗಳಾದ ಬುನ್‌ಟೊಮ್ ಚಾಯ್‌ಮೂನ್‌ (55 ) ಹಾಗೂ ಪತ್ನಿ ಅಮುನ್ಯುಯ್‌ ಚಾಯ್‌ಮೂನ್‌ (49) ಭಾನುವಾರ ತಮ್ಮ ಊರಿನ ಮಹಾ ಸರ್ಕಾಮ್ ಎಂಬಲ್ಲಿ ರೋಡ್‌ ಟ್ರಿಪ್ ಹೋಗಿದ್ದರು. ತಡರಾತ್ರಿ ಮೂರು ಗಂಟೆಗೆ ಪತ್ನಿಗೆ ಶೌಚಾಲಯಕ್ಕೆ ಹೋಗುವ ಧಾವಂತ ಎದುರಾಯಿತು. ತಕ್ಷಣ ಗಂಡ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ. ಅಲ್ಲಿ ಜನಸಂಖ್ಯೆ ಇದ್ದುದರಿಂದ ಆಕೆ ಸ್ವಲ್ಪ ದೂರಕ್ಕೆ ತೆರಳಿ ಮೂತ್ರ ವಿಸರ್ಜನೆ ಮಾಡಿ ಬಂದಿದ್ದಾಳೆ. ಬರುವಾಗ ಗಂಡನ ಕಾರು ಅಲ್ಲಿರಲಿಲ್ಲ. ಅಲ್ಲಿ ಬೇರೆ ವಾಹನಗಳು ಇಲ್ಲದಿದ್ದುದರಿಂದ ಹಾಗೂ ತನ್ನ ಫೋನ್ ಕಾರಿನಲ್ಲಿ ಬಾಕಿಯಾಗಿದ್ದರಿಂದ ಹೊರ ಪ್ರಪಂಚಕ್ಕೆ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ನಡೆದುಕೊಂಡೇ ಸಣ್ಣ ಊರನ್ನು ತಲುಪಿ ಅಲ್ಲಿಂದ ಪೊಲೀಸರ ಮೂಲಕ ಗಂಡನಿಗೆ ವಿಷಯ ತಿಳಿಸಲಾಯಿತು. ಆಶ್ಚರ್ಯಕರ ವಿಷಯ ಎಂದರೆ ಗಂಡನಿಗೆ ಹೆಂಡತಿ ಕಾಣೆಯಾಗಿದ್ದು ಗೊತ್ತಾಗಿದ್ದೇ ಆಗ. ಆಕೆ ಮಲಗಿದ್ದಾಳೆ ಎಂದೇ ಭಾವಿಸಿ ಗಂಡ ಆರಾಮವಾಗಿ ಕಾರು ಚಲಾಯಿಸಿಕೊಂಡೇ ಹೋಗಿದ್ದು ವಿಶೇಷ.

Related posts

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಸಂಗತಿ,ಇಲ್ಲವಾದಲ್ಲಿ ಈ ಗತಿ ನಿಮಗೂ ಆಗಬಹುದು,ಎಚ್ಚರ!

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ: 21ಕ್ಕೆ ಮತ ಎಣಿಕೆ

ಸಾಲ ತೀರಿಸಲು ಬಾಲಕನ ಬೆತ್ತಲೆ ಪೂಜೆ ಮಾಡಿಸಿದ ಕಿಡಿಗೇಡಿಗಳು