ನ್ಯೂಸ್ ನಾಟೌಟ್ : ಈ ಜಗವೇ ಒಂದು ವಿಸ್ಮಯ ಲೋಕ . ಕೆಲವೊಂದು ವಿಸ್ಮಯಗಳು ನಮ್ಮನ್ನು ಅಚ್ಚರಿ ಮೂಡಿಸುತ್ತದೆ. ಅದರಲ್ಲೂ ಕೆಲವು ನಮ್ಮನ್ನು ದಿಗ್ಬ್ರಮೆಗೆ ಒಳಗಾಗುವಂತೆ ಮಾಡುತ್ತದೆ. ಮಾನವನು ತನ್ನನ್ನು ಹೋಲುವ ಮಗುವಿಗೆ ಜನ್ಮ ನೀಡುವುದು ಸಹಜ. ಆದರೆ ಮನುಷ್ಯನ ಮುಖದಂತೆ ಇರೋ ಮರಿಗೆ ಜನ್ಮ ನೀಡಿದ್ದು ನೀವು ಎಂದಾದರೂ ನೋಡಿದ್ದೀರಾ. ಹೌದು ಇದೇ ರೀತಿಯ ಜಗತ್ತಿಗೆ ಸವಾಲು ಹಾಕುವ ಮತ್ತೊಂದು ವಿಸ್ಮಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ವಿದಿಶಾದ ಸಿರೊಂಜ್ ತಹಸಿಲ್ನ ಸೆಮಲ್ ಖೇಡಿ ಗ್ರಾಮದ ನಿವಾಸಿ ನವಾಬ್ ಖಾನ್ ಎಂಬವರ ಮನೆಯಲ್ಲಿ ಅವರ ಮುದ್ದಿನ ಮೇಕೆಯೊಂದು ಮಾನವನ ಮುಖವನ್ನು ಹೋಲುವಂತಹ ಮರಿಗೆ ಜನ್ಮ ನೀಡಿದ್ದು , ಅದರ ಮಖ ಮನುಷ್ಯರಂತಿದ್ದು ಜನರು ಬೆರಗಾಗಿದ್ದಾರೆ. ಮರಿಯು ಮನುಷ್ಯನಂತೆ ಹೋಲುವ ಎರಡು ಕಣ್ಣುಗಳು ಅವುಗಳ ಸುತ್ತಲೂ ಕಪ್ಪು ವೃತ್ತವಿದ್ದು ನೋಡಲು ಅಂದವಾಗಿದೆ, ಬಾಯಿ ಹಾಗೂ ತಲೆಯ ಮೇಲೆ ಸಾಕಷ್ಟು ಬಿಳಿ ಕೂದಲುಗಳಿವೆ. ಮೇಕೆಯ ಈ ವಿಚಿತ್ರ ಆಕಾರದಿಂದ ಸಿರಿಂಜ್ ನಿಂದಲೇ ಹಾಲು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಪೊಟೋ ಮತ್ತು ವಿಡಿಯೋ ವೈರಲ್ ಆಗಿದ್ದು , ಇದನ್ನು ನೋಡುವ ಸಲುವಾಗಿ ಬೇರೆ ಊರು, ರಾಜ್ಯಗಳಿಂದ ಜನರು ಆಗಮಿಸುತ್ತಿದ್ದಾರೆ.