ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23ರಿಂದ 9 ರಿಂದ 12ನೇ ತರಗತಿಗಳು ಶುರುವಾಗಲಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಘೋಷಣೆ ಮಾಡಿದ್ದಾರೆ. ಈಗಾಗಲೇ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಾವುದೇ ರೀತಿಯಲ್ಲಿ ಅಡೆ ತಡೆ ಇಲ್ಲದೇ ಮಕ್ಕಳಲ್ಲಿ ಸೊಂಕು ಉಂಟಾಗದಂತೆ ನಡೆಸಲಾಗಿದೆ. ಯಶಸ್ವಿಯಾಗಿ ಕೂಡ ಪರೀಕ್ಷೆ ಮುಗಿದಿದೆ ಈ ಹಿನ್ನೆಲೆಯಲ್ಲಿ ಮಕ್ಕಳ ತಂದೆ-ತಾಯಿಯಗಳು ಶಾಲೆಗೆ ಕಳುಹಿಸುತ್ತಾರೆ ಎನ್ನುವ ನಂಬಿಕೆ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ತಂದೆ -ತಾಯಿ ಭಯಪಡುತ್ತಿದ್ದಾರೆ. ಎಲ್ಲರು ಧೈರ್ಯ ಮಾಡಿ ಮಕ್ಕಳನ್ನು ಕಳಿಸಬೇಕಿದೆ ಅಂತ ಹೇಳಿದರು.