Uncategorized

ಸಿದ್ದರಾಮಯ್ಯರಿಗಾಗಿ ಬೃಹತ್ ಮೈಸೂರು ಪಾಕ್ ಹಾರ,ಕ್ರೇನ್ ಮೂಲಕ ಸಮರ್ಪಣೆ,ತೂಕ ಎಷ್ಟು ಗೊತ್ತಾ?

ನ್ಯೂಸ್ ನಾಟೌಟ್ : ಮೈಸೂರಿನಲ್ಲಿ ಕಾಂಗ್ರೆಸ್‌ ಜನಧ್ವನಿ ಯಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್‌ ಮೈಸೂರ್‌ ಪಾಕ್‌ ಹಾರವನ್ನು ತಯಾರಿಸಲಾಗಿದೆ.ಈ ಹಾರ ಎಷ್ಟು ಕೆಜಿ ತೂಕ ಇದೆ ಗೊತ್ತಾ?ಇಲ್ಲಿದೆ ಮಾಹಿತಿ.

ಮೈಸೂರು ಪಾಕ್ ಹಾರ:

ಮೈಸೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನಲೆ ಮೈಸೂರು ಪಾಕ್ ಹಾರ ರೆಡಿಯಾಗಿದೆ.‌ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಬೃಹತ್ ಮೈಸೂರು ಪಾಕ್ ಹಾರ ತಯಾರಾಗಿದೆ. ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಕಾಳಿಸಿದ್ದನ ಹುಂಡಿ ಜೈ ಸ್ವಾಮಿಯವರು ಈ ಮೈಸೂರು ಪಾಕ್ ಹಾರವನ್ನ ಮಾಡಿಸಿದ್ದಾರೆ.ಬೃಹತ್ ಹಾರಗಳಿಂದಲೇ ದಾಖಲೆ ಬರೆದಿರುವ ಜೆಡಿಎಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಇದೀಗ ಮೈಸೂರು ಪಾಕ್ ಹಾರ ಸಿದ್ಧಪಡಿಸುತ್ತಿದ್ದಾರೆ.

ಬರೋಬ್ಬರಿ 750 ಕೆಜಿ ತೂಕ:

ಬೃಹತ್ ಹಾರಕ್ಕಾಗಿ ಬರೊಬ್ಬರಿ 750 ಕೆಜಿ ಮೈಸೂರು ಪಾಕ್ ಬಳಕೆ ಮಾಡಲಾಗಿದೆಯಂತೆ. ಅಲ್ಲದೆ ಇದರ ಜತೆ 250ಕೆಜಿ ಹೂ ಸೇರಿದಂತೆ 1000 ಕೆಜಿ ತೂಕದ ಬೃಹತ್ ಹಾರ ಸಿದ್ಧವಾಗಿದೆ. ಸುಮಾರು 2.5 ಲಕ್ಷ ರೂ ವೆಚ್ಚದಲ್ಲಿ ಈ ಮೈಸೂರು ಪಾಕ್ ಹಾರ ನಿರ್ಮಾಣವಾಗುತ್ತಿರೋದು ವಿಷೇಶ.ಚಾಮುಂಡೇಶ್ವರಿ ಕ್ಷೇತ್ರದ ಕಾಳಿಸಿದ್ದನ ಹುಂಡಿಯ ವ್ಯಾಪಾರಿ ಜೈ ಸ್ವಾಮಿಯವರ ತಂಡ ಇದನ್ನು ಸಿದ್ದಪಡಿಸುತ್ತಿದೆ.

ಕ್ರೇನ್ ಮೂಲಕ ಹಾರ ಸಮರ್ಪಣೆ:

20 ಜನರ ತಂಡದಿಂದ ಸುಮಾರು 15 ಗಂಟೆಗಳ ಪರಿಶ್ರಮದಿಂದ ಮೈಸೂರು ಪಾಕ್ ಹಾರ ತಯಾರಿಯಾಗಲಿದೆ.ಮೈಸೂರಿನ ಕಾಂಗ್ರೆಸ್ ಕಛೇರಿ ಮುಂಭಾಗ ಕ್ರೇನ್ ಮೂಲಕ ಸಿದ್ದರಾಮಯ್ಯಗೆ ಬೃಹತ್ ಮೈಸೂರು ಪಾಕ್ ಹಾರ ಸಮರ್ಪಣೆ ಮಾಡಲಿದ್ದಾರೆ.

Related posts

ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ, ಹಲವರ ಸ್ಥಿತಿ ಗಂಭೀರ

ಗೂನಡ್ಕದಲ್ಲಿ ಆಂಟಿ ವಿಷಯದಲ್ಲಿ ಹೊಡೆದಾಟ? ಓರ್ವ ಆಸ್ಪತ್ರೆಗೆ ದಾಖಲು

ನಾಳೆ ಹುಣಸೂರಿನಲ್ಲಿ ಮಾಜಿ ಸೈನಿಕರ ಶಕ್ತಿ ಪ್ರದರ್ಶನ, ಡಾ ಶಿವಣ್ಣ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಮಾಜಿ ಸೈನಿಕರ ಒಕ್ಕೂಟದಿಂದ ಬೃಹತ್‌ ಪಾದಯಾತ್ರೆ