ನಾಳೆ ಹುಣಸೂರಿನಲ್ಲಿ ಮಾಜಿ ಸೈನಿಕರ ಶಕ್ತಿ ಪ್ರದರ್ಶನ, ಡಾ ಶಿವಣ್ಣ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಮಾಜಿ ಸೈನಿಕರ ಒಕ್ಕೂಟದಿಂದ ಬೃಹತ್‌ ಪಾದಯಾತ್ರೆ

4

ಮೈಸೂರು: ಹುಣಸೂರು ತಾಲೂಕಿನಲ್ಲಿ ಐದು ಸಾವಿರ ಎಕರೆಗಿಂತಲೂ ಹೆಚ್ಚು ಮಾಜಿ ಸೈನಿಕರಿಗಾಗಿ ಮೀಸಲಿಟ್ಟ ಜಮೀನನ್ನು ಅಲ್ಲಿನ ಸ್ಥಳೀಯ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ. ಸರಕಾರವು ಈ ಕೂಡಲೇ ಜಮೀನನ್ನು ರೈತರಿಂದ ಮುಕ್ತಗೊಳಿಸಿ ಮಾಜಿ ಸೈನಿಕರಿಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಮಂಗಳವಾರ ಹುಣಸೂರಿನಲ್ಲಿ ಮಾಜಿ ಸೈನಿಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಪಾದಯಾತ್ರೆಯಲ್ಲಿ ಯಾರೆಲ್ಲ ಭಾಗಿ?

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೈಸೂರು ಜಿಲ್ಲಾಧ್ಯಕ್ಷರು ದಿವಾಕರ್ ಕೆ.ಪಿ, ಮೈಸೂರು ಜಿಲ್ಲಾ ಸಶಸ್ತ್ರ ಸೇನಾ ಪಡೆ ಸಂಘದ ಅಧ್ಯಕ್ಷ ಬಿದ್ದಪ್ಪ ಬಿ.ಕೆ, ಮೈಸೂರು ಕೊಡಗು ಗೌಡ ಮಾಜಿ ಸೈನಿಕರ ಸಂಘ ಅಧ್ಯಕ್ಷ ಬಸಪ್ಪ ಸಿ.ಕೆ, ಮಾಜಿ ಸೈನಿಕರ ಸಂಘ ಮೈಸೂರು ಈಸ್ಟ್‌ ಅಧ್ಯಕ್ಷ ಅಯ್ಯಪ್ಪ ಕಾಂಜಿತಂಡ ಹಾಗೂ ಮೈಸೂರು ಮಿಲಿಟರಿ ವೆಟರನ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್‌ ಪಿ ಸೇರಿದಂತೆ ಒಟ್ಟು ಮೈಸೂರಿನ ಐದು ಸಂಘಗಳು ಒಂದಾಗಿ ಮೈಸೂರು ಜಿಲ್ಲಾ ಮಾಜಿ ಸೈನಿಕರ ಒಕ್ಕೂಟ ನಿರ್ಮಿಸಿ ಮಾಜಿ ಸೈನಿಕರ ರಾಜ್ಯಾಧ್ಯಕ್ಷ ಡಾ ಎನ್.ಕೆ. ಶಿವಣ್ಣ ಅವರ ನೇತೃತ್ವದಲ್ಲಿ ಐದು ಜಿಲ್ಲಾಧ್ಯಕ್ಷರ ಸಹಯೋಗದೊಂದಿಗೆ ಹುಣಸೂರಿನಲ್ಲಿ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಮುನ್ನೂರಕ್ಕೂ ಅಧಿಕ ಮಾಜಿ ಸೈನಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಾದಯಾತ್ರೆ ಹುಣಸೂರಿನ ಹಳೆ ಬಸ್‌ ನಿಲ್ದಾಣದಿಂದ ದಿವಂಗತ ದೇವರಾಜ ಅರಸು ಅವರ ಪ್ರತಿಮೆಯವರೆಗೂ ಸಾಗಲಿದೆ. ಬಳಿಕ ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ನಂತರ ಮಾಜಿ ಸೈನಿಕರೆಲ್ಲರೂ ಮೈಸೂರಿಗೆ ಬಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.

Related Articles

Uncategorizedಕ್ರೈಂರಾಜ್ಯವೈರಲ್ ನ್ಯೂಸ್

ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..! ಆರೋಪಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್: ಶೀಲ ಶಂಕಿಸಿ ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಆನೇಕಲ್ ಹೆಬ್ಬಗೋಡಿ...

Uncategorizedಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್..!​ ಪೊಲೀಸ್ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ಸ್ಥಳೀಯರು..!

ನ್ಯೂಸ್ ನಾಟೌಟ್: ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಚೆನ್ನೈನ...

Uncategorizedಕ್ರೈಂರಾಜ್ಯವೈರಲ್ ನ್ಯೂಸ್

ರಥೋತ್ಸವದ ವೇಳೆ ಗುರುಬಸವೇಶ್ವರ ರಥದ ಸ್ಟೇರಿಂಗ್ ಕಟ್..! ಸ್ಕೂಟಿ ಹಾಗೂ ಬೈಕ್‌ ಗಳು ರಥದಡಿಗೆ ಸಿಲುಕಿ ಅಪ್ಪಚ್ಚಿ..!

ನ್ಯೂಸ್ ನಾಟೌಟ್ : ವಿಜಯನಗರ ಜಿಲ್ಲೆಯ ಐತಿಹಾಸಿಕ ಕೊಟ್ಟೂರು ಗುರುಬಸವೇಶ್ವರ ತೇರನ್ನು ಹೊರತೆಗೆಯುವಾಗ ಅವಘಡ ಸಂಭವಿಸಿದ್ದು,...

@2025 – News Not Out. All Rights Reserved. Designed and Developed by

Whirl Designs Logo