Uncategorized

ಹಸು ಸಿಂಹದ ಮರಿಗೆ ಜನ್ಮ ನೀಡೋದಕ್ಕೆ ಸಾಧ್ಯನಾ?ಈ ವಿಷಯ ಕೇಳಿ ಬೆಚ್ಚಿ ಬಿದ್ದ ಜನ…

ನ್ಯೂಸ್ ನಾಟೌಟ್ : ಪ್ರತಿದಿನ ಚಿತ್ರವಿಚಿತ್ರ ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಈ ಸುದ್ದಿ ಅದಕ್ಕಿಂತಲೂ ಸ್ವಲ್ಪ ಭಿನ್ನವಾಗಿದೆ.ನಾಯಿ ಹೊಟ್ಟೆಯಲ್ಲಿ ಬೆಕ್ಕಿನ ಮರಿ ಇರೋದಕ್ಕೆ ಸಾಧ್ಯನಾ? ಖಂಡಿತ ಇಲ್ಲ…ನಾಯಿ, ನಾಯಿ ಮರಿಗೆ ಜನ್ಮ ನೀಡುತ್ತದೆ.ಬೆಕ್ಕು ಅದರದ್ದೇ ಜಾತಿಯ ಬೆಕ್ಕಿನ ಮರಿಗೆ ಜನ್ಮ ಕೊಡುತ್ತದೆ..

ಆದರೆ ಇಲ್ಲೊಂದು ಕಡೆ ಸಿಂಹವನ್ನು ಹೋಲುವ ಕರುವಿಗೆ ಹಸು ಜನ್ಮ ನೀಡಿದೆ ಅಂದ್ರೆನೀವು ನಂಬಲೇಬೇಕು.ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಹಳ್ಳಿಯೊಂದರ ನತ್ತುಲಾಲ್ ಶಿಲ್ಪಕರ್ ಎಂಬ ರೈತನ ಮನೆಯಲ್ಲಿ ಹಸುವೊಂದು ಸಿಂಹದ ಮರಿಯನ್ನು ಹೋಲುವಂಥ ಕರುವಿಗೆ ಜನ್ಮ ನೀಡಿದೆ. ಇಂಥದ್ದೊಂದು ವಿಚಿತ್ರ ಘಟನೆಯಿಂದ ಗ್ರಾಮಸ್ಥರು ಮಾತ್ರವಲ್ಲದೆ ಪಶುವೈದ್ಯರು ಕೂಡ ಅಚ್ಚರಿಗೊಂಡಿದ್ದಾರೆ. ಈ ವಿಷಯ ಹರಡುತ್ತಿದ್ದಂತೆ ರೈತನ ಮನೆ ಬಳಿ ಜನ ಜಮಾಯಿಸಿದ್ದರು.ಆದರೆ ಹಸು ಈ ರೀತಿಯ ಕರುವಿಗೆ ಜನ್ಮ ನೀಡಲು ಕಾರಣವೇನು?ಎಂಬುದರ ಮಾಹಿತಿ ತಿಳಿದು ಬರಬೇಕಿದೆ.

Related posts

ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಅಂಚೆ ಇಲಾಖೆಯಿಂದ ಗುಡ್ ನ್ಯೂಸ್

ಬೆಂಗಳೂರಿನ ವಿಧಾನ ಸೌಧ ಕೊಠಡಿಯಲ್ಲಿ ಸಚಿವ ಅಂಗಾರ ಪೂಜೆ, ಗಣ್ಯರಿಂದ ಶುಭ ಹಾರೈಕೆ

13 ವರ್ಷದ ಬಾಲಕಿಗೆ 47 ವರ್ಷದ ಸರಕಾರಿ ಶಾಲೆ ಶಿಕ್ಷಕನಿಂದ ಪ್ರೇಮ ಪತ್ರ..!