ಬೆಂಗಳೂರು: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರ ಬೆಂಗಳೂರು ವಿಧಾನ ಸೌಧದ ಸಚಿವರ ಕಚೇರಿ ಪೂಜೆಯನ್ನು ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ಶುಕ್ರವಾರ ನೆರವೇರಿಸಲಾಯಿತು. ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ,ಸುಭೋದ್ ಶೆಟ್ಟಿ ಮೇನಾಲ,ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ ಕಡಬ,ಸುಳ್ಯ ನ.ಪಂ.ಅಧ್ಯಕ್ಷ ವಿನಯ ಕಂದಡ್ಕ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,ಸದಸ್ಯ ಪ್ರಸನ್ನ ದರ್ಬೆ, ಯುವಮೋರ್ಚಾ ಅಧ್ಯಕ್ಷ ಕೃಷ್ಣ, ಪ್ರಕಾಶ್ ಎನ್.ಕೆ ,ಸಚಿವ ಅಂಗಾರ ಅವರ ಪತ್ನಿ ವೇದಾವತಿ,ಮಕ್ಕಳಾದ ಪೂಜಾ,ಗೌತಮ್ ಮೊದಲಾದವರು ಪಾಲ್ಗೊಂಡಿದ್ದರು.