ಕರಾವಳಿ

ಮಹಿಳೆಯರು ಡ್ರೆಸ್ ಹಾಕುವ ಸ್ಥಳದಲ್ಲಿ ಕ್ಯಾಮರಾ ಇರಿಸಿ ಸಿಕ್ಕಿಬಿದ್ದ ನರ್ಸಿಂಗ್ ವಿದ್ಯಾರ್ಥಿ

ನ್ಯೂಸ್ ನಾಟೌಟ್ : ಖಾಸಗಿ ಆಸ್ಪತ್ರೆಯೊಂದರಲ್ಲಿ ಕಲಿಯುತ್ತಿರುವ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಮಹಿಳೆಯರು ಡ್ರೆಸ್ ಬದಲಾಯಿಸುವ ಸ್ಥಳದಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೊಲೀಸರು ೨೧ ವರ್ಷದ ನರ್ಸಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಪವನ್ ಕುಮಾರ್ ಆರೋಪಿ.  ಆಸ್ಪತ್ರೆಗೆ ತಮಾಸಣೆಗೆ ಬಂದವರು ಸ್ಕಾನಿಂಗ್ ಗೆ ಒಳಗಾಗುವ ಮುನ್ನ ಬಟ್ಟೆ ಬದಲಾಯಿಸಬಾಕಾಗುತ್ತದೆ. ಈ ವೇಳೆ ಪವನ್ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದಾನೆ. ಸ್ಕ್ಯಾನಿಂಗ್ ಗೆ ಬಂದ ಮಹಿಳೆಯೊಬ್ಬರು ಉಡುಪು ಬದಲಾಯಿಸುವ ಮೊದಲು ಕೊಠಡಿಯನ್ನು ಸೂಕ್ತವಾಗಿ ಪರಿಸೀಲಿಸಿದಾಗ ಮೂಲೆಯಲ್ಲಿ ರಹಸ್ಯ  ಕ್ಯಾಮರಾ ಇರುವುದು ಪತ್ತೆಯಾಗಿದೆ. ಕೂಡಲೇ ಅವರು ಈ ವಿಷಯವನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ. ಸುರತ್ಕಲ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು  ಆರೋಪಿಯನ್ನು ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಪುತ್ತೂರಿನಲ್ಲಿ ಬಿಜೆಪಿ ಮುಖಂಡರ‌ ಭಾವಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ! ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಯತ್ನ: ಶಾಸಕ ಅಶೋಕ್ ರೈ ಆರೋಪ!

ಅಂಧ ಗಾಯಕಿಗೆ ಒಲಿದು ಬಂತು ಸಿನಿಮಾದಲ್ಲಿ ಹಾಡುವ ಅವಕಾಶ..!ಜಗತ್ತನ್ನೇ ಕಾಣದ ಗಾಯಕಿಗೆ ಅದ್ಭುತ ಅವಕಾಶವನ್ನೇ ಸೃಷ್ಟಿಸಿದ್ರು ಖ್ಯಾತ ನಿರ್ದೇಶಕ..!

ಇನ್ಮುಂದೆ ಖಾಸಗಿ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ..? ಕರ್ನಾಟಕ ರಾಜ್ಯ ಬಸ್‌ ಮಾಲೀಕರ ಒಕ್ಕೂಟದ ಅಧ್ಯಕ್ಷ ಹೇಳಿದ್ದೇನು?