ಕೊಡಗು

ಅಂತ್ಯಕ್ರಿಯೆಗೆ ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ: ಓರ್ವ ಸ್ಥಳದಲ್ಲೇ ಸಾವು

ಮಡಿಕೇರಿ: ಅನಾರೋ ಗ್ಯದಿಂದಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಬ್ಬೂರುಕಟ್ಟೆ ಗ್ರಾ .ಪಂ ವ್ಯಾಪ್ತಿಯ ಹಳೇ ಮದಲಾಪುರ ಹಾಡಿಯಲ್ಲಿ ನಡೆದಿದೆ. ಹಾಡಿಯ ನಿವಾಸಿ ಗೋವಿಂದ (48) ಮೃತ ದುರ್ದೈವಿ.

ಮೃತಪಟ್ಟಿದ್ದ ಹಾಡಿಯ ಕುಮಾರ ಎಂಬವರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ಹುಳುಗಳು ಸ್ಥಳದಲ್ಲೇ ಇದ್ದ ಗೋವಿಂದ ಎಂಬವರ ಮೇಲೆ ದಾಳಿ ನಡೆಸಿರುವುದರಿಂದ ಗೋವಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದವರು ಹೆಜ್ಜೇನು ದಾಳಿ ಕಂಡು ಶವವನ್ನು ಸ್ಥಳದಲ್ಲೇ ಬಿಟ್ಟು ಪ್ರಾಣ ಉಳಿಸುವುದಕ್ಕಾಗಿ ಓಡಿದ್ದಾರೆ. ಆದರೆ ಹೆಜ್ಜೇನು ದಾಳಿಗೆ ಒಳಗಾಗಿ ಗಾಯಗೊಂಡ ಮುತ್ತಪ್ಪ, ಪಾರ್ವತಿ, ಅಣ್ಣಯ್ಯ, ಪರಣ್ಣಿ, ನಾಗಣ್ಣ, ಗೌಡ ಈ ಆರು ಮಂದಿಯನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಮಡಿಕೇರಿ:’ಜೀವನದಾರಿ’ ವೃದ್ಧಾಶ್ರಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕ ಮಂತರ್‌ ಗೌಡ,ಸಮಾಜ ಸೇವಕ ರಮೇಶ್ ಮತ್ತು ರೂಪ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಧರೆಗುರುಳಿದ 6 ಕೆ,ಜಿ ತೂಕದ ಆಲಿಕಲ್ಲು

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಮಾಹಿತಿ ಕಾರ್ಯಕ್ರಮ